ವೇದ ವೇದಾಂತದಲ್ಲಿ ಹುಟ್ಟಿದ ಆವುದಾನೊಂದು ಜ್ಞಾನವು
ವಿದ್ಯೆ ಎಂದು ಹೇಳಲಾಗುವುದು.
ಆ ವಿದ್ಯೆಯಲ್ಲಿ ಅವನಾನೋರ್ವನು ಕ್ರೀಡಿಸುತ್ತಿರುವನು,
ಆತನು ‘ವೀರ’ನೆಂದು ಹೇಳುವರಯ್ಯ
ಶಾಂತವೀರೇಶ್ವರಾ
ಸೂತ್ರ:ಬಳಿಕ ವೇದಾಂತ ಸಿದ್ಧಾಂತವಾದ ‘ವೀರ’ ಪೂರ್ವಕವಾದ ಸಿದ್ಧಾಂತ ಪ್ರಸಿದ್ಧವಾದ ಶಿವತತ್ವಜ್ಞಾನವು ವೀರಶೈವನು ‘ಮಾಹೇಶ್ವರ’ ತತ್ವದ ಕರ್ಮವುಳ್ಳ ಮಾಹೇಶ್ವರರನು ಸೂತ್ರತ್ರಯದಿಂದೆ ಪೇಳುತಿರ್ದಪಂ.