Index   ವಚನ - 37    Search  
 
ಕೂಪ ಚಿಲುಮೆ ಬಹುಜಲಂಗಳಲ್ಲಿ ಸ್ವೀಕರಿಸಿಕೊಂಬುದು ಅದೇತರ ಶೀಲ? ತನು ಕರಗದೆ, ಮನ ಮುಟ್ಟದೆ, ಆಗಿಗೆ ಮುಯ್ಯಾಂತು ಚೇಗಿಗೆ ಹಲುಬುತ್ತ, ಸುಖದುಃಖವೆಂಬ ಉಭಯವರಿಗಾಣದೆ, ಅಂದಂದಿಗೆ ಆಯು ಸಂದಿತ್ತೆಂದಿರಬೇಕು. ಆ ಗುಣ ಶಿವಲಿಂಗ ಖಂಡಿತ ನೇಮ, ಈ ಸಂಗವೆ ಎನಗೆ ಸುಖ; ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಕೂಟ.