Index   ವಚನ - 39    Search  
 
ಕೆಯಿಗೆ ಬೆಚ್ಚು ಬೆದರ ಕಟ್ಟುವಲ್ಲಿ ಆ ಲೆಪ್ಪಕ್ಕೆ ಇಷ್ಟಲಿಂಗ, ರುದ್ರಾಕ್ಷಿ, ಭಸಿತಪಟ್ಟವ ಕಟ್ಟಿ, ಎನ್ನ ಕೆಯ್ಯ ತಪ್ಪಲಲ್ಲಿ ಕಾಷ್ಠವ ನೆಟ್ಟು ಕಟ್ಟಿದ ಮತ್ತೆ, ವಿಹಂಗಕುಲ ಮೃಗಜಾತಿ ಮುಟ್ಟಲಿಲ್ಲ. ಮೀರಿಬಂದು ಮುಟ್ಟಿಹೆನೆಂದಡೆ ಮುಟ್ಟುವುದಕ್ಕೆ ಮುನ್ನವೆ ಅಟ್ಟಿ ಅದ್ದರಿಸಿ ಕುಟ್ಟಿ ಓಡಿಸುವವು. ಅದು ತೃಣದ ಲೆಪ್ಪದ ಬಲಿಕೆಯೊ! ತನ್ನ ಚಿತ್ತದ ಬಲಿಕೆಯೊ? ಅದು ಎನ್ನ ನಿನ್ನ ದೃಷ್ಟದ ಭಾವ. ಅದು ಎನ್ನ ಸ್ವತಂತ್ರವಲ್ಲ.ಅದು ನಿಮ್ಮಯ ಭಾವ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಾ.