ಗಂಡ ಹೆಂಡರಿಗೆ ಒಬ್ಬ ಗುರುವೆ ದೀಕ್ಷೆಯ ಕೊಡಬಹುದು.
ಬೇರೆ ಬೇರೆ ಇಬ್ಬರು ಗುರುಗಳಿಂದ ಉಪದೇಶ ಸಲ್ಲದು.
ಹಾಗೆ ಪಡೆದರೆ ಭಕ್ತಿಹೀನವಹರು.
ಗಂಡಹೆಂಡಿರು ಒಡಹುಟ್ಟಿದವರು ಮಕ್ಕಳು ತೊತ್ತಿರು ಬಂಟರು
ಒಬ್ಬ ಗುರುವಿನಿಂದ ದೀಕ್ಷೆಯ ಪಡೆವುದು ಅತ್ಯಂತ ಉತ್ತಮ.
ಗುರು ಒಬ್ಬನೆ, ಲಿಂಗ ಒಂದೆ, ಪ್ರಸಾದ ಒಂದೆ,
ಗಂಡಹೆಂಡಿರುಗಳಿಗೆ ಒಬ್ಬ ಗುರುವಾದಿದ್ದರೆ
ಭಕ್ತಿ ಇಲ್ಲ, ಮುಕ್ತಿ ಇಲ್ಲ, ಗುರುಗಳಿಬ್ಬರು ಲಿಂಗವೆರಡು ಆಗದು.
ಅದು ಕಾರಣ ಒಬ್ಬ ಗುರುವೆ ಅಧಿಕವಯ್ಯ
ಶಾಂತವೀರೇಶ್ವರಾ