ಮಹಾಲಿಂಗವು ಸ್ಥೂಲ ಸೂಕ್ಷ್ಮ ಪರಾತ್ಪರವೆಂದು
ಮೂರು ಪ್ರಕಾರವಾಗಿ ಹೇಳುವರು
ಸಾಕ್ಷಿ: ‘ಅಂತರ್ಧಾರಯಿತುಂ ಲಿಂಗೆ| ಮ ಶಕ್ತಂ ಏವ ವಾ ಬಾಹ್ಯೇನ
ಧಾರೆಯೇ ಲಿಂಗ ತಲ್ಲಿಂಗಮಿತಿ ನಿಶ್ಚಯಾತ್’ ಎಂದುದಾಗಿ
ಯಾವ ಲಿಂಗವನ್ನು ದೇಹದ ಹೊರಗೆ ಧರಿಸುವರೊ,
ಅದು ಇಷ್ಟಲಿಂಗವು; ಈ ಇಷ್ಟಲಿಂಗವೆ ‘ಸ್ಥೂಲ’ವಾಗಿರ್ದುದು.
ಯಾವ ಲಿಂಗವು ಹೃದಯ ಕಮಲದಲ್ಲಿ ತನ್ಮಾತ್ರದಿಂದ ಭಾವನಾ
ರೂಪವಾಗಿರುವದೊ, ಅದು ಪ್ರಾಣಲಿಂಗ; ಅದುವೆ ‘ಸೂಕ್ಷ್ಮ’ವು.
ಯಾವ ಲಿಂಗವು ಪರಾತ್ಪರವೆಂದು ಹೇಳುವರೊ,
ಅದು ‘ತೃಪ್ತಿಲಿಂಗ’
ಮತ್ತಮಾ ಸ್ಥೂಲವಾದ ಇಷ್ಟಲಿಂಗ ಧಾರಣವೆಂತೆಂದಡೆ,
ವ್ಯಕ್ತವಲ್ಲದ ವೇದಾಗಮಂಗಳಲ್ಲಿ
ಪರಬ್ರಹ್ಮ ಶಿವನೆಂದು ಪ್ರಸಿದ್ಧವಾದ ಹೆಸರುಳ್ಳ
ಷಟ್ಸ್ಥಲದಲ್ಲಿ ಪ್ರಸಿದ್ಧವಾಗಿ ಭಾವನಾತೀತವಾದ
ಮಹಾಲಿಂಗವೆ ಅನಿಷ್ಟವಾದ ಸಂಸಾರ
ಪಾಶವನು ಪರಿಹರಿಸುವದರಿಂದ,
ಇಷ್ಟವಾದ ಪರಾತ್ಪರ ಮುಕ್ತಿಯ ಕೊಡುವದರಿಂದ,
ಪ್ರತ್ಯಕ್ಷವಾದ ಈ ಇಷ್ಟಲಿಂಗವನು ಬಲ್ಲವನು
ದೇಹದಲ್ಲಿ ಅವಧಾನದಿಂದ
ಎಲ್ಲಾ ಕಾಲದಲ್ಲಿ ಧರಿಸುವದಯ್ಯ ಶಾಂತವೀರೇಶ್ವರಾ