Index   ವಚನ - 45    Search  
 
ಖ್ಯಾತಿಯ ಲಾಭಕ್ಕೆ ವ್ರತವ ಮಾಡಿಕೊಂಡವನ ನೇಮವ ನೋಡಾ! ಊರಿಗೆ ಬಲುಗಯ್ಯ ಬಂದುಣ್ಣಬೇಕೆಂದು ದಾರಿದಾರಿಯ ಕಾಯ್ದು ಮತ್ತಾರನು ಏನೆಂದರಿಯದೆ. ಮತ್ತಾರು ಆರೈಕೆಗೊಂಡಡೆ ದೇವರೆಂದು, ಬಂದವರ ದಾರಿಗರೆಂದು ಕಾಣುತ್ತ ಇಂತೀ ಗಾರಾದ ಮನಕ್ಕೆ ಇನ್ನಾರು ಹೇಳುವರಯ್ಯಾ! ಮುಂದೆ ಬಸುರಾಗಿ ಹೆರುವಾಗ ಊರೆಲ್ಲರು ಅವಳಂಗವ ಕಂಡಂತೆ ಜಗಭಂಡ ಶೀಲವಂತನಾಗಿ, ತನ್ನ ಕೊಂಡಾಡುವ ಸತ್ತ ಮತ್ತೆ ಮೂರು ಹೆಂಡಗುಡಿ ಹೇಯಶೀಲ ಕಂಡವರಿಗೆ ನಗೆಯಾಯಿತ್ತು ಇದರಂದಕಂಜಿ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಕಂಡೂ ಕಾಣದಂತಿದ್ದ.