Index   ವಚನ - 54    Search  
 
ಜಾಗ್ರದಲ್ಲಿ ಹೋಹಡೆ, ಎನ್ನ ವ್ರತಕ್ಕೆ ಅರ್ಹರಾಗಿದ್ದವರಲ್ಲಿಗಲ್ಲದೆ ಹೋಗೆನು. ಸ್ವಪ್ನದಲ್ಲಿ ಕಾಂಬಲ್ಲಿ ಎನ್ನ ಸಮಶೀಲವಂತರನಲ್ಲದೆ ಕಾಣೆನು. ಸುಷುಪ್ತಿಯಲ್ಲಿ ತೊಳಗಿ ಬೆಳಗಿ ಆಡುವಾಗ ಎನ್ನ ನೇಮದಲ್ಲಿಯೆ ಅಡಗುವೆ. ಈ ಸೀಮೆಯಲ್ಲಿ ತಪ್ಪಿದೆನಾದಡೆ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ತಪ್ಪುಕನಹೆನು.