Index   ವಚನ - 58    Search  
 
ತನ್ನಾಚಾರಕ್ಕೆ ಬಂದವರು ತನ್ನವರೆಂದು ಭಾವಿಸಬೇಕಲ್ಲದೆ, ತನ್ನಾಚಾರಕ್ಕೆ ಹೊರಗಾದವರ ಅಣ್ಣತಮ್ಮನೆಂದು, ತಾಯಿತಂದೆ ಎಂದು, ಹೊನ್ನು ಮಣ್ಣು ಹೆಣ್ಣಿನವರೆಂದು, ಅಂಗೀಕರಿಸಿದಡೆ, ಅವರಂಗಣವ ಕೂಡಿದಡೆ, ಅವರೊಂದಾಗಿ ನುಡಿದಡೆ, ಭಕ್ತರು ಸತ್ಯರಿಗೆ ಮುನ್ನವೆ ಹೊರಗು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರನೊಳಗಿಟ್ಟುಕೊಳ್ಳ.