ತನುಶೀಲವಂತರುಂಟು,
ಧನಶೀಲವಂತರುಂಟು,
ಧರೆಶೀಲವಂತರುಂಟು,
ಕನಕ ವನಿತೆಶೀಲವಂತರುಂಟು.
ಕೆಯಿ ತೋಟ ಹಿಂದೆಸೆ ಮುಂದೆಸೆ
ನಿಳಯಶೀಲವಂತರುಂಟು.
ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ
ರಸದ್ರವ್ಯ ಪಶು ಪಾಷಾಣ ವಸ್ತ್ರ ಪರಿಮಳ
ಛತ್ರ ಚಾಮರ ಅಂದಳ ಕರಿ ತುರಗಂಗಳು
ಮುಂತಾದವೆಲ್ಲಕ್ಕೂ ಶೀಲವಂತರುಂಟು.
ಅನುಸರಣೆಯ ಕಂಡಲ್ಲಿ, ಆಚಾರ ತಪ್ಪಿದಲ್ಲಿ,
ಲಿಂಗ ಬಾಹ್ಯವಾದಲ್ಲಿ,
ಆಗವೆ ಅಂಗವ ಬಿಟ್ಟು ಲಿಂಗದೊಡಗೂಡುವ
ಶೀಲವಂತರಂಗವ ಕಾಣೆ.
ಎನ್ನ ಕ್ರೀ ಭಂಗವಹುದಕ್ಕೆ ಮುನ್ನವೆ ನಿರಂಗವ ಹೇಳಾ,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವೆ.
Art
Manuscript
Music
Courtesy:
Transliteration
Tanuśīlavantaruṇṭu,
dhanaśīlavantaruṇṭu,
dhareśīlavantaruṇṭu,
kanaka vaniteśīlavantaruṇṭu.
Keyi tōṭa hindese mundese
niḷayaśīlavantaruṇṭu.
Phala kusuma vidaḷa bahudhān'ya muntāda
rasadravya paśu pāṣāṇa vastra parimaḷa
chatra cāmara andaḷa kari turagaṅgaḷu
muntādavellakkū śīlavantaruṇṭu.
Anusaraṇeya kaṇḍalli, ācāra tappidalli,
liṅga bāhyavādalli,
āgave aṅgava biṭṭu liṅgadoḍagūḍuva
śīlavantaraṅgava kāṇe.
Enna krī bhaṅgavahudakke munnave niraṅgava hēḷā,
ācārave prāṇavāda rāmēśvaraliṅgave.