Index   ವಚನ - 346    Search  
 
ಮತ್ತಮಾ ಸಿಂಹಾಸನದಲ್ಲಿ ಶಿವಲಿಂಗ ಸ್ಥಾಪನ ಸನ್ನಿಧಾನ ಸಂಶೋಧನ ಸಮ್ಮಖೀಕರಣವೆಂಬ ಕ್ರಿಯೆಗಳಂ ಮಾಡಿ ಬಳಿಕ ಪೂಜಾ ಪ್ರಾರಂಭದಿಂ ತೊಡಗಿ ಪೂಜಾ ಸಮಾಪ್ತಿ ಪರಿಯಂತರಂ ಕ್ಷಾಲನ ಪಾತ್ರ ಜಲಮಂ ಮರಳಿ ಮರಳಿ ನದಿ ತಟಾಕ ಕೂಪಂಗಳಲ್ಲಿ ಸ್ವಾದು ಮಿಶ್ರ ಲವಣಂಗಳಾದ ಕ್ರಮದಿಂದುತ್ತಮ ಮಧ್ಯಮ ಕನಿಷ್ಠಮಾದ ಪೂಜಾ ಯೋಗ್ಯಮಾದುದಕ ಭೇದಂಗಳಂ ಬಳಿಯ ಸಾಸುವೆ ಕುಸುಮ ದೂರ್ವೆ ಕೋಷ್ಟ ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ ಸಾಸುವೆ ಜವೆ ನೆಲು ಕ್ಷೀರವೆಂಬಾರು ಅರ್ಘ್ಯ ದ್ರವಂಗಳಂ, ಬಳಿಕ ಪರಮ ಪವಿತ್ರ ದ್ರವ್ಯಂಗಳಿಂ ಮಾಳ್ಪ ತ್ರಿವಿಧೋಪಚಾರ, ಪಂಚೋಪಚಾರ, ಅಷ್ಟೋಪಚಾರ, ದಶೋಪಚಾರ, ಷೋಡಶೋಪಚಾರ ವಿಂಶತ್ಯುಪಚಾರ ದ್ವಾತ್ರಿಂಶದುಪಚಾರಗಳುಂಟುವರಲ್ಲಿ ಆವಾಹನ ಆಸನ ಪಾದ್ಯ ಅರ್ಘ್ಯ ಆಚಮನೀಯ ಸ್ನಾನ ವಸ್ತ್ರ ಯಜ್ಞ ಸೂತ್ರ ಭೂಷಣ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ಮುಖವಸನ ನೀರಾಜನ ದರ್ಪಣ ಫಲಾರ್ಪಣ ತಾಂಬೂಲ ಪ್ರದಕ್ಷಣೆ ನಮಃಸ್ಕಾರ ಸ್ತೋತ್ರ ಪುರಾಣ ಪಠಣ ಛತ್ರ ವಾದ್ಯ ಚಾಮರ ವ್ಯಜನ ಶಯ್ಯೆ ಸಂಗೀತ ನೃತ್ಯ ವಾದ್ಯ ಆತ್ಮಾರೋಪಣವೆಂಬ ದ್ವಾತ್ರಿಂಶದೂಪಚಾರಂಗಳಂಒ ಸಮಂತ್ರವಾಗಿ ಮಾಡುವುದಯ್ಯ ಶಾಂತವೀರೇಶ್ವರಾ