ತಾ ಮುಳುಗಿದ ಮತ್ತೆ
ಸಮುದ್ರದ ಪ್ರಮಾಣ ತನಗೇನು?
ತಾನೊಂದು ಶಸ್ತ್ರದಲ್ಲಿ ಸಲೆ ಸಂದ ಮತ್ತೆ
ತನ್ನಂಗವ ಹಲವು ಶಸ್ತ್ರ ಬಂಧಿಸಿದಡೇನು?
ತಾ ನಿಂದ ನಿರಿಗೆಯಲ್ಲಿ ಸಂದ ಮತ್ತೆ
ಸಂದಣಿಗಾರರ ಬಂಧದ ಮಾತೇತಕ್ಕೆ?
ಇದು ವ್ರತಾಚಾರದ ನಿಂದ ನಿರಿಗೆ, ಸಲೆ ಸಂದ ನೇಮ.
ಕಟ್ಟಾಚಾರಿಯ ದೃಷ್ಟನಿಷ್ಠೆ.
ಆಚಾರವೆ ಪ್ರಾಣವಾದ
ರಾಮೇಶ್ವರಲಿಂಗದೊಳಗೆ ಕಟ್ಟಿದ ತೊಡರು.
Art
Manuscript
Music Courtesy:
Video
TransliterationTā muḷugida matte
samudrada pramāṇa tanagēnu?
Tānondu śastradalli sale sanda matte
tannaṅgava halavu śastra bandhisidaḍēnu?
Tā ninda nirigeyalli sanda matte
sandaṇigārara bandhada mātētakke?
Idu vratācārada ninda nirige, sale sanda nēma.
Kaṭṭācāriya dr̥ṣṭaniṣṭhe.
Ācārave prāṇavāda
rāmēśvaraliṅgadoḷage kaṭṭida toḍaru.