Index   ವಚನ - 417    Search  
 
ಜಂಗಮ ಪ್ರಸಾದವನ್ನು ತನ್ನಿಷ್ಟಲಿಂಗಕ್ಕೆ ಅರ್ಪಿಸಿ ಆ ಲಿಂಗ ಪ್ರಸಾದವ ತಾ ಕೊಂಡೊಡೆ ಆ ಲಿಂಗವೇ ಭಕ್ತ, ಭಕ್ತನೆ ಲಿಂಗವಯ್ಯ. ಹೀಂಗಲ್ಲದೆ ಜಂಗಮ ಪ್ರಸಾದವ ಅಂಗಕ್ಕೆ ಕೊಡಬಹುದಲ್ಲದೆ ಲಿಂಗಕ್ಕೆ ಕೊಡಲಾಗದೆಂಬ ಅನಾಚಾರಿಗೆ ನರಕ ಪ್ರಾಪ್ತಿಯಯ್ಯ ಜಂಗಮ ಪ್ರಸಾದವೆ ಇಷ್ಟಲಿಂಗ್ಕಕೆ ಪ್ರಾಣವಯ್ಯ ಶಾಂತವೀರೇಶ್ವರಾ