Index   ವಚನ - 475    Search  
 
ಎಲೆ ಸಂಸಾರ ವಿದ್ರಾವಕನಾದಂತಹ ಶಿವನೆ, ನಿನ್ನಿಂದ ಭುಂಜಿಸಿ ಕೊಟ್ಟ, ಅತ್ಯಂತ ಸುಖವ ಕೊಡುವ, ಸಂಸಾರ ರೋಗಮಂ ಕೆಡಿಸುವ ತ್ರಿವಿಧ ಪ್ರಸಾದ ದ್ವಾದಶ ಪ್ರಸಾದಗಳಿಂದೆ ನಿನ್ನ ಭಕ್ತನ ಆಯುಷ್ಯ ಶತಸಂವತ್ಸರವು. ಪರಮ ಶ್ರೇಷ್ಠನಾದ ನಿನ್ನ ಭಕ್ತನು ಅಹಂಕಾರ ಮಮಕಾರಗಳಿಂದ ದೂರನು ಪಾಪರಹಿತನು ಭಕ್ತಿಯುಕ್ತನು ಶಿವಜ್ಞಾನ ಉಳ್ಳವನಹನಯ್ಯ ಶಾಂತವೀರೇಶ್ವರಾ