Index   ವಚನ - 76    Search  
 
ನಚ್ಚುಮಚ್ಚಿನ ವ್ರತ, ನಿಷ್ಠೆಹೀನನ ಪೂಜೆ, ಭಕ್ತಿ ಇಲ್ಲದವನ ಮಾಟಕೂಟ ಇಂತಿವು ಸತ್ಯವಲ್ಲ. ಆ ವ್ರತ ನೇಮ ನಿತ್ಯಂಗಳಲ್ಲಿ ಮನ ವಚನ ಕಾಯ ತ್ರಿಕರಣ ಶುದ್ಧವಾಗಿ, ಬಾಹ್ಯಕ್ರೀಯಲ್ಲಿ ಅರಿವ ಆತ್ಮನಲ್ಲಿ, ಮಿಕ್ಕಾದ ಪದಾರ್ಥಂಗಳಲ್ಲಿ ಸದ್ಭಾವ ತಾನಾಗಿ, ಅರಿವಿಂಗೂ ಆಚಾರಕ್ಕೂ ಎಡೆದೆರಪಿಲ್ಲದೆ ಕ್ರೀಯೆ ವಸ್ತುವಾಗಿ, ವಸ್ತುವೆ ಕ್ರೀಯಾಗಿ, ಬಣ್ಣ ಬಂಗಾರದಂತೆ ನಿಂದಂಗವೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಂಗ.