ಅಜಪಾ ಗಾಯಿತ್ರಿ ರೂಪವಾದ
ಶಿವಯೋಗ ಸಮಾಧಿ ಎಂತೆಂದೊಡೆ:
ಪೃಥ್ವಾದಿ ಶಿವ ತತ್ವಾಂತ್ಯಮಾದ
ಸಮಸ್ತತತ್ವಗಳ ಊರ್ಧ್ವಭಾಗವನೆಯ್ದಿದ
ಸತ್ತುಚಿತ್ತಾನಂದ ಸ್ವರೂಪಿನಿಂದ ಒಪ್ಪುತ್ತ
ವಾಙ್ಮನಕ್ಕೆ ವಿಷಯವಲ್ಲದೆ ಇರ್ದು
ಪೃಥಕ್ಕರಿಸಿ ನಿರ್ದೇಶಿಸಬಾರದ ನಿಜಪ್ರಕಾಶವನು
ಅರಿವೆ ಸ್ವರೂಪವಾಗಿ ಉಳ್ಳ ಉಮೆ ಎಂಬ ಹೆಸರುಳ್ಳ
ಶುಕ್ಲಪಟನ್ಯಾಯದೋಪಾದಿಯಗಿ ಪ್ರಣವರೂಪವಾದ
ಸಮಶಕ್ತಿಯಿಂದ ಪ್ರಕಾಶಿಸುವ ಹಂಸರೂಪವಾದ ಪರಮಾತ್ಮನು
ಆ ಪರಶಿವನೆ ನಾನು ಎಂಬ ಭಾವದಿಂದ ಭಾವಿಸುವುದು.
ಆ ಜೀವೇಶ್ವರರ ಏಕತ್ವದ ಸಿದ್ಧಯೆ ಪರಮ
ಸಮಾಧಿಯೆಂದು ತಿಳಿವುದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ajapā gāyitri rūpavāda
śivayōga samādhi entendoḍe:
Pr̥thvādi śiva tatvāntyamāda
samastatatvagaḷa ūrdhvabhāgavaneydida
sattucittānanda svarūpininda opputta
vāṅmanakke viṣayavallade irdu
pr̥thakkarisi nirdēśisabārada nijaprakāśavanu
arive svarūpavāgi uḷḷa ume emba hesaruḷḷa
śuklapaṭan'yāyadōpādiyagi praṇavarūpavāda
samaśaktiyinda prakāśisuva hansarūpavāda paramātmanu
ā paraśivane nānu emba bhāvadinda bhāvisuvudu.
Ā jīvēśvarara ēkatvada sid'dhaye parama
samādhiyendu tiḷivudayya
śāntavīrēśvarā