ಬಳಿಕ ಸಮಾಧಿಗೆ ಯೋಗ್ಯ ಸ್ಥಾನಂಗಳು ಅವುವೆಂದಡೆ,
ತಮ್ಮ ತಮ್ಮ ಮನೆಗಳಲ್ಲಿ ಆಗಲಿ
ಗೋಶಾಲೆಯಲ್ಲಿ ಆಗಲಿ ತುರುಮಂದೆಯಲ್ಲಿ ಆಗಲಿ
ಕೆರೆತಡಿಯಲ್ಲಿ ಆಗಲಿ ನದೀತೀರದಲ್ಲಿ ಆಗಲಿ
ಹೂದೋಟದಲ್ಲಿ ಆಗಲಿ ಗ್ರಾಮ ಮಧ್ಯದಲ್ಲಿ ಆಗಲಿ
ಅರಣ್ಯದಲ್ಲಿ ಆಗಲಿ ಪರ್ವತಾಶ್ರಮದಲ್ಲಿ ಆಗಲಿ
ಎಂಟು ಸ್ಥಾನಾಶ್ರಯಸ್ಥಲಂಗಳಲ್ಲಿ
ಶರೀರ ನಿಕ್ಷೇಪಕ್ಕೆ ಪ್ರಯತ್ನ ಮಾಡುವುದಯ್ಯ
ಶಾಂತವೀರೇಶ್ವರಾ