ನೇಮವ ಮಾಡಿಕೊಂಡು
ತನ್ನಯ ಸಂಸಾರದ ಕಾಮ್ಯಾರ್ಥಕ್ಕಾಗಿ
ಐದು ಹತ್ತು ಹದಿನೈದೆಂದು ಮೀರಿ ಬಂದಡೆ
ಕೃತ್ಯವಿಲ್ಲ ಎಂದು
ಅವರಿಗಿಕ್ಕಿಹೆವೆಂದು ಭಕ್ತರ ಮನೆಯಲ್ಲಿ ಹೊಕ್ಕು ಹೊಕ್ಕು
ಬೇಡುವುದು ಭಕ್ತನ ಯುಕ್ತಿಯೆ?
ಆರೊಡವೆಯ ಆರಿಗೆ ಬೇಡಿ ಮಾಡಿ
ತಾನು ದಾರಿಯಾದೆನೆಂಬ ಭೋಗಿಯ ನೋಡಾ?
ವೇಶಿಯ ಪುತ್ರ ಪೈತೃಕವ ಮಾಡಿದಲ್ಲಿ
ಅದೇತರ ಊಟ? ಅದೇತರ ಮಾಟ?
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಸಲ್ಲದ ನೇಮ.