Index   ವಚನ - 576    Search  
 
ಆತ್ಮನೆ ಅಂಗವಾದೈಕ್ಯನಲ್ಲಿ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೆಂಬ ಪಂಚಾಂಗವು ಅಡಗಿ ಆ ಐಕ್ಯಂಗೆ ಮಹಾಲಿಂಗವೆ ಸಂಬಂಧವಾಗಿ ಮಹಾಲಿಂಗದಲ್ಲಿಯೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗವೆನಿಸುವ ಪಂಚಲಿಂಗವು ಐಕ್ಯವಾಗಿ ಆ ಮಹಾಲಿಂಗವೆ ಆಶ್ರಯವಾಗಿ ಇಂತೀ ಷಡ್ವಿಧ ಲಿಂಗದಲ್ಲಿ ಕೂಡಿ ಅವಿರಳವಾಗಿರ್ದಾತನೆ ಐಕ್ಯನಯ್ಯ ಶಾಂತವೀರೇಶ್ವರಾ