Index   ವಚನ - 581    Search  
 
ಪುಣ್ಯ ಪಾಪಾತ್ಮಕವಹ ಕ್ರಿಯೆ ಕರ್ಮಕಂಡದಲ್ಲಿ ಮಾಡಿದುದು. ಶಿಲಾ ಲೇಖನದ ಹಾಂಗೆ, ತೊಡೆದಡೆ ಹೋಗದು. ಜ್ಞಾನಕಾಂಡದಲ್ಲಿ ಮಾಡಿದುದು, ಭೂಲಿಪಿಯ ಹಾಂಗೆ, ತೊಡೆದರೆ ಹೋಗದು. ಭಕ್ತಿಕಾಂಡದಲ್ಲಿ ಮಾಡಿದುದು ಜಲಲಿಪಿಯ ಹಾಂಗೆ; ಅದೆಂತೆಂದೊಡೆ, ಕಲ್ಲಮೇಲಣ ಲಿಪಿಯ ಲೋಪಿಸಲಾಗದು. ನೆಲದ ಮೇಲಣ ಲಿಪಿಯು ಲೋಪಿಸಬಹುದು. ಜಲಲಿಪಿಯು ಮೊದಲಲ್ಲಿ ಬರೆಯಲಾಗದು ಕಡೆಯಲ್ಲಿ ಲೋಪಿಸಲು ಬಾರದು. ಅದು ಕಾರಣ ಭಕ್ತಿಕಾಂಡವೆ ನಿರ್ಲೇಪವಾಗಿಹುದಯ್ಯ ಶಾಂತವೀರೇಶ್ವರಾ