Index   ವಚನ - 657    Search  
 
ಅವನಾನೊಬ್ಬ ದೇಶಿಕನು ಸಮಸ್ತ ವಸ್ತುಗಳಲ್ಲಿಯೂ ಆಖಂಡಿತವಾದ ಚೈತನ್ಯವನ್ನು ಶಿವಯೋಗ ಸಾಮರ್ಥ್ಯದಿಂದ ವ್ಯಕ್ತೀಕರಿಸುವನು, ಆ ಆಚಾರ್ಯನು ಜಗತ್ಪ್ರಕಾಶನಾಗಿದ್ದಾತನಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಉಪದೇಶಕ್ಕೋಸ್ಕರವಾಗಿ ದೀಕ್ಷಾಗುರು ಸ್ವರೂಪವನೆಯ್ದಿದ ಲಿಂಗವು ಭಕ್ತನಂಗದಲ್ಲಿ ಶಿಕ್ಷಾಮುಖದಿಂದ ಬೋಧಗುರು ಸ್ವರೂಪವನೆಯ್ದಿದ ಭೇದವು ಎಂತಿದ್ದಿತೆಂದನೆ ಮುಂದೆ ‘ಶಿಕ್ಷಗುರುಸ್ಥಲ’ವಾದುದು.