Index   ವಚನ - 96    Search  
 
ಭಕ್ತಂಗೆ ಬಯಕೆ ಉಂಟೆ? ನಿತ್ಯಂಗೆ ಸಾವುಂಟೆ? ಸದ್ಭಕ್ತಂಗೆ ಮಿಥ್ಯ ತಥ್ಯ ಉಂಟೆ? ಕರ್ತೃ ಭೃತ್ಯನಾದ ಠಾವಿನಲ್ಲಿ ಪ್ರತ್ಯುತ್ತರಂಗೆಯ್ದಡೆ ಸತ್ಯಸದಾಚಾರಕ್ಕೆ ಹೊರಗು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಾಣತಿ.