Index   ವಚನ - 694    Search  
 
ವ್ರತಭ್ರಷ್ಟರ ಭವಿವರ್ತಕರ ಗೃಹಂಗಳಂ ಬಿಟ್ಟು ಸರ್ವ ವರ್ಣಂಗಳು ಸಮವಾಗಿ ಜಾತಿ ಭೇದವಿಲ್ಲದೆ ಶಿವಭಕ್ತರು ಗೃಹಂಗಳಲ್ಲಿ ಭಕ್ತಿ ಭಕ್ಷವ ಬೇಡುತ್ತೆ ಈ ಲೋಕಂಗಳ ಕಾಮಂಗಳು [ಅನ್ಯ]ವುಳ್ಳವನಾಗುತ್ತ ಬಯಸಿದ ರೂಪ ಉಳ್ಳವನಾಗುತ್ತ ಸಂಚರಿಸುತಿರ್ದಾತನಾಗಿ ಈ ಹಾ ಉ ಹಾ ಉ ಹಾ ಉ ಅಹಮನ್ನಂ ಅಹಮನ್ನಂ ಅಹಮನ್ನಂ ಅಹಮನಾದೊ ಅಹಮನಾದೋದ ಎಂಬ ‘ಸಾಮಶ್ರುತಿ’ಯನು ‘ಹಾ’ ಎಂಬ ಶಿವಾತ್ಮಕ ಶುದ್ಧ ಪ್ರಸಾದ ಮಂತ್ರವನು ‘ಈ’ ಎಂಬ ಚಿಚ್ಚಕ್ತಿ ಮಂತ್ರವನು ಗಾನವ ಮಾಡುತ್ತಿರ್ದಾತನಾಗಿಹನಯ್ಯ ಶಾಂತವೀರೇಶ್ವರಾ