Index   ವಚನ - 717    Search  
 
ಎನ್ನ ಲಿಂಗಕ್ಕೆ ಪೀಠವಾದ ಹಸ್ತವು ಷಡ್ಗುಣೈಶ್ವರ್ಯದಿಂದ ಪೂಜ್ಯವಾದುದು. ಎನ್ನ ಹಸ್ತವು ಅತ್ಯಂತ ಪೂಜ್ಯವಾದುದು. ಆ ಲಿಂಗಕ್ಕೆ ಪೀಠವಾದ ಎನ್ನ ವಾಮ ಹಸ್ತವು ಮಾಯಾ ಪ್ರಪಂಚವೆಂಬ ರೋಗಕ್ಕೆ ವೈದ್ಯವು. ಎನ್ನ ಈ ಹಸ್ತವು ಶಿವಲಿಂಗವನು ಸುತ್ತಿ ಬಳಸಿ ಸ್ಪರ್ಶಿಸಿಕೊಂಡಿಹುದು. ಅಭಿಮರ್ಶನ ಶಬ್ದವು ಒಂದೆ ಸ್ಪರ್ಶವಾಚಿಯಲ್ಲ ‘ಅಭಿತಃಮರ್ಶಿ ತಿತ್ಯಭಿಮರ್ಶನಂ’ ಎಂದಪ್ಪುದಪ್ಪದು. ಆ ಈ ಹಸ್ತವೆ ತಾಯಿ, ಆ ಈ ಹಸ್ತವೆ ತಂದೆ, ಆ ಈ ಹಸ್ತವೆ ಜೀವನೌಷಧವು, ಎಲೆ ಮಿತ್ರನಾದ ಶಿವನೇ ನಿನ್ನ ಈ ಶಿವಲಿಂಗವನು ಪ್ರಸರ್ಪಣಿಯೆಂದು ಲೋಕೋತ್ಪತ್ತಿ ಮತ್ತಂ, ನಿಜವೆ ಭಕ್ತಿ., ಆ[ತ್ಮ]ನೆ ಕ್ಷೇತ್ರವು ಆ ಭಕ್ತಿಗೂ ಆತ್ಮಂಗೂ ಭೇದವಿಲ್ಲ, ಬೀಜವೆಂಬುದರರ್ಥ ‘ಬನ್ನಿ ಅಗಲದಿರಿ’ ಎಂದು ಬೇಡಿಕೊಂಬುದಯ್ಯ ಶಾಂತವೀರೇಶ್ವರಾ