Index   ವಚನ - 8    Search  
 
ವೈಶೇಷಿಕವೇ ದ್ರವ್ಯ ಗುಣ, ಕರ್ಮ ಸಾಮಾನ್ಯ ವಿಶೇಷ ಸಮವಾಯವೆಂಬ ಷಟ್ಪದಾರ್ಥ ಪ್ರತಿಪಾದಕತ್ವದಿಂ, ಪ್ರಪಂಚ ಸ್ವರೂಪಮಂ ವಿಭಾಗಿಸುತ್ತಿರ್ಕುಂ, ಬಳಿಕ ಕಪಿಲ ಪತಂಜಲಿ ವ್ಯಾಸರೆಂಬ ಮುನಿಗಳಿಂ ಕ್ರಮದಿಂ ವಿರೂಪಿತಂಗಳಾದ ಸಾಂಖ್ಯ ಪಾತಂಜಲ ವೇದಾಂತಗಳೆಂಬ ಅತ್ಮಜ್ಞಾನಫಲವಾಗುಳ್ಳವೆ ಆಧ್ಯಾತ್ಮಿಕ ಶಾಸ್ತ್ರತ್ರಯಂಗಳವರಲ್ಲಿ ಸಾಂಖ್ಯವೆ ನಿತ್ಯನಿರ್ಮಲರಾದಾತ್ಮರ ಸನ್ನಿಧಾನದಿಂ ಗುಣತ್ರಯಾತ್ಮಿಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮರ ಸನ್ನಿಧಾನದಿಂ ಗುಣತ್ರಯಾತ್ಮಕ ಪ್ರಕೃತಿಯೆ ಪಂಚವಿಂಶತಿತತ್ವಾತ್ಮಕ ಜಗವಾಗಿ ವ್ಯವಹರಿಸೂದೆ ಸಂಸಾರ ಬಂಧವೆಂಬುದಂ ಸತ್ವಾದಿ ಗುಣತ್ರಯಾನುಕ್ರಮದಿಂ ಶ್ಲೇಷ್ಮಪ್ರಕೃತಿ ಪಿತ್ತ ಪ್ರಕೃತಿ ವಾತಪ್ರಕೃತಿ[ಗಳುಳ್ಳ] ಶಾಂತಿಕ್ರೋಧಮೂಢತ್ವಾದಿ ಗುಣಾದಿಗಳಾದ ಉತ್ತಮ ಮಧ್ಯಮ ಅಧಮ …..ತ್ರಯದ ….ಮೊದಲಾದವಂ ವಿಭಾಗಿಸೂದೆಯ್ಯ ಶಾಂತವೀರೇಶ್ವರಾ.