‘ಅನ್ಯೇಷಾಂ ಸ್ವಾರ್ಥಯಜನಂ ನ ಕುರ್ಯ್ಯಾತ್ತು ಪರಾರ್ತ್ಥಕಂ||
ಮೋಹಲೋಭಾಶ್ಚ ಕುರ್ವಿತರಾಜ್ಞಾ ರಾಷ್ಟ್ರಸ್ಯ ದುಃಸ್ಥಿತಿಃ’ ||
ಎಂದು ಶಿವಾವರಣಂಗಳಲ್ಲಿ ಅಲ್ಲದೆ ಪೃಥಕ್ ಸ್ಥಾನಸ್ಥರಾದ
ವಿಷ್ಣಾದ್ಯನ್ಯ ದೇವತೆಗಳು ಪೂಜೆಯನು ಶುದ್ಧಶೈವನು
ಸ್ವಾರ್ಥವಾಗಿಯೂ ಪರಾರ್ಥವಾಗಿಯೂ ಮಾಡಲಾಗದು.
ಮರವೆಯ ದೆಸೆಯಿಂದಲೂ ಸಂಸಾರ ಲೋಭದ ದೆಸೆಯಿಂದಲೂ
ಮಾಡುವನಾದೊಡೆ ಆ ರಾಜ್ಯಕ್ಕೆಯೂ ಆ ರಾಜಂಗೆಯೂ ಕೇಡಪ್ಪುದು.
ಈ ಅರ್ಥಮಂ ವ್ಯಕ್ತಮಂ ಮಾಡಿದಪಂ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘An'yēṣāṁ svārthayajanaṁ na kuryyāttu parārt'thakaṁ||
mōhalōbhāśca kurvitarājñā rāṣṭrasya duḥsthitiḥ’ ||
endu śivāvaraṇaṅgaḷalli allade pr̥thak sthānastharāda
viṣṇādyan'ya dēvategaḷu pūjeyanu śud'dhaśaivanu
svārthavāgiyū parārthavāgiyū māḍalāgadu.
Maraveya deseyindalū sansāra lōbhada deseyindalū
māḍuvanādoḍe ā rājyakkeyū ā rājaṅgeyū kēḍappudu.
Ī arthamaṁ vyaktamaṁ māḍidapaṁ
śāntavīrēśvarā