‘ಹಸ್ತಮಸ್ತಕಸಂಯೋಗಾದ್ಭೂತಿಪಟ್ಟಸ್ಯ ಧಾರಣಾತ್ | ಶಿವದೇವೇತಿ ವಿಜ್ಞೇಯಃ
ಸರ್ವಪಾಪೈಃ ಪ್ರಮುಚ್ಯತೇ’ || ಎಂದು
ವೀರಶೈವಾಚಾರ್ಯನ ಹಸ್ತದ ವೀರಮಾಹೇಶ್ವರನಪ್ಪ ಶಿಷ್ಯನ
ಮಸ್ತಕದ ಸಂಯೋಗದ ದೆಸೆಯಿಂದಲೂ
ವಿಭೂತಿಯ ಪಟ್ಟವ ಧರಿಸೂದರ ದೆಸೆಯಿಂದಲೂ
ಆ ಶಿಷ್ಯನ ….. ದೇಹಿ ಎಂದರಿಯಲ್ತಕ್ಕಾತನು.
ಅಂತಪ್ಪ ವೀರಮಾಹೇಶ್ವರನು
ಎಲ್ಲಾ ಪಾಪಂಗಳಿಂದಲೂ ಬಿಡಲ್ಪಡುತ್ತಿಹನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
‘Hastamastakasanyōgādbhūtipaṭṭasya dhāraṇāt | śivadēvēti vijñēyaḥ
sarvapāpaiḥ pramucyatē’ || endu
vīraśaivācāryana hastada vīramāhēśvaranappa śiṣyana
mastakada sanyōgada deseyindalū
vibhūtiya paṭṭava dharisūdara deseyindalū
ā śiṣyana….. Dēhi endariyaltakkātanu.
Antappa vīramāhēśvaranu
ellā pāpaṅgaḷindalū biḍalpaḍuttihanayya
śāntavīrēśvarā