ಲವಣವ ಕೊಂಬುದೆಲ್ಲವು ಒಂದೆ ಶೀಲ.
ಸರ್ವ ಸಪ್ಪೆ ಎಂಬುದು ಒಂದೆ ಶೀಲ.
ಇವೆಲ್ಲವ ವಿಚಾರಿಸಿ, ತಟ್ಟುಮುಟ್ಟಿಗೆ ಬಾರದೆ
ತೊಟ್ಟುಬಿಟ್ಟ ಹಣ್ಣಿನಂತೆ ನೆಟ್ಟನೆ ವ್ರತವ ಕೂಡುವುದು
ಮೂರನೆಯ ಶೀಲ.
ಮೂರು ಕೂಡಿ ಒಂದಾಗಿ ನಿಂದುದು,
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದ ಶೀಲ.
Art
Manuscript
Music
Courtesy:
Transliteration
Lavaṇava kombudellavu onde śīla.
Sarva sappe embudu onde śīla.
Ivellava vicārisi, taṭṭumuṭṭige bārade
toṭṭubiṭṭa haṇṇinante neṭṭane vratava kūḍuvudu
mūraneya śīla.
Mūru kūḍi ondāgi nindudu,
ācārave prāṇavāda rāmēśvaraliṅgada śīla.