ಬಡಪಶು ಪಂಕದಲ್ಲಿ ಬಿದ್ದೊಡೆ ಕಾಲ ಬಡಿವುದಲ್ಲದೆ
ಬೇರೆ ಗತಿಯುಂಟೆ?
ಶಿವ ಶಿವಾ! ಹೋದಹೆ, ಹೋದಹೆನಯ್ಯಾ!!
ನಿಮ್ಮ ಮನದತ್ತಲೆನ್ನ ತೆಗೆಯಯ್ಯಾ.
ಪಶುವಾನು: ಪಶುಪತಿ ನೀನು!
ತುಡುಗಣಿಯೆಂದು ಎನ್ನ ಹಿಡಿದು ಬಡಿಯದ ಮುನ್ನ,
ಒಡೆಯ ನಿಮ್ಮ ಬಯ್ಯದಂತೆ ಮಾಡು,
ಕೂಡಲ ಸಂಗಮದೇವಾ.
Hindi Translationदीन पशु पंक में गिरे,
तो पैर फटकने के सिवा कोई चारा है?
शिव शिव! अब डूबा, अब डूबा,
मुझे अपने मन की ओर आकृष्ट करो,
मैं पशु हूँ, तुम पशुपति हो,
उपद्रवी पशु समझ मुझे पकड मारने के पूर्व
स्वामी तव निंदा न होने दो कूडलसंगमदेव ॥
Translated by: Banakara K Gowdappa
English Translation Oh the poor beast thrashing his legs
When fallen into the mire !
What choice has it ?
Good God, I'm gone, gone, Lord !
Oh, lift me to thy heart-
A member of thy herd,
My herdsman thou !-
Before they seize the straggling thief
And thrash it, Lord,
Laying it to thy shame !
Translated by: L M A Menezes, S M Angadi
Tamil Translationதளர்ந்த பசு சேற்றிலே வீழ்ந்தால்,
காலினையசைத்தலன்றி வேறு நிலை யுண்டோ?
சிவனே, சிவனே, செல்கிறேன், செல்கிறே னையனே,
நீர் விரும்பும் முறையிலே எனை மேலேற்று மையனே;
பசுநான், பசுபதி நீ,
திருட்டுப்பசு வென்றென்னைப் பிடித்தடிக்கு முன்,
உடையனே, உம்மை இகழா வண்ணம் செய்வீர்
கூடல சங்கம தேவனே.
Translated by: Smt. Kalyani Venkataraman, Chennai
Telugu Translationపేద పశువు బురదలోబడ కాలాడిరచుగాని;
వేరు గతిగలదే? శివశివా! పోతిపడిపోతినయ్యా !
నను నీకడ కీడ్చుకొనుమయ్యా!
పశువు నేను పశుపతివి నీవు!
చౌర్య జీవియని ననుబట్టి కొట్టక ముందే
ప్రభూ! నిను తిట్ట నటు సేయుమ కూడల సంగమదేవ!
Translated by: Dr. Badala Ramaiah
Urdu Translationمیں توگائے ہوں ، بہت بھولا ہُوں
کہیں دلدل میں اگردھنس جاؤں
چارۂ کارنہ پاؤں کوئی،
ہاتھ اور پَیر ہلانے کےسوا
اے مرے شیو، اے مرے پربھو
ایسے دَلْدل سے بچانا مجھ کو
اے مرے شیو میرے پالن ہار
یہ مرا د ل ہی تیرا مَسکن ہو
میں توگائے ہوں بہت بھولا ہوں
اور،توہی پشوپتی ہےمرا،
لوگ آوارہ سمجھ کرمجھ کو
اس سے پہلےکہ لگائیں کوڑے
راستہ مجھ کو دکھادو سیدھا
ورنہ یہ لوگ تومیرے کارن،
تجھ کوکوسیں گےکوڈلا سنگم
Translated by: Hameed Almas
ಕನ್ನಡ ವ್ಯಾಖ್ಯಾನತನ್ನ ಒಡೆಯನಲ್ಲದವನೊಬ್ಬನ ಹಸಿರು ತೋಟಕ್ಕೆ ಪಶುವೊಂದು ನುಗ್ಗಿ ಮೇಯುತ್ತಿದ್ದಾಗ-ಅಲ್ಲಿಯ ಕಾವಲಾಳುಗಳು ಕಂಡು ಅದನ್ನು ಅಟ್ಟಿಸಿಕೊಂಡು ಬಂದರೆ-ಅದು ದಿಕ್ಕುತಪ್ಪಿ ಓಡುವ ರಭಸದಲ್ಲಿ ಪಂಕದಲ್ಲಿ ಬಿದ್ದು ಎದ್ದೇಳಲಾರದೆ ಕಾಲುಬಡಿಯುತ್ತಿರುವುದು. ಅಟ್ಟಿಸಿಕೊಂಡು ಬಂದವರೋ-ಯಾವನ ಮನೆಯ ದನವಿದೆಂದು ಅದರ ಒಡೆಯನನ್ನು ಬೈಯುತ್ತ ಆ ಪಶುವನ್ನು ಹಿಡಿದು-ತುಡುಗುಣಿ, ಸಿಕ್ಕಿದೆಯಾ ಎಂದು ದಡಿಗೊಂಡು ಬಡಿಯುವರು.
ಎಂಬ ಈ ಗ್ರಾಮಚಿತ್ರದ ಹಿನ್ನೆಲೆಯಲ್ಲಿ-ಜೀವನೆಂಬ ಪಶು ತನ್ನ ಅಧ್ಯಾತ್ಮಕ್ಷೇತ್ರದಲ್ಲಿ ಆನಂದಾ ಮೃತವನ್ನು ದಣಿಯಮೇಯದೆ-ಮಾಯಾಸಂಬಂಧವಾದ ವಿಷಯಪ್ರಪಂಚದಲ್ಲಿ ಅತಿಯಾಗಿ ಪ್ರವೇಶ ಮಾಡಿ ಅಲ್ಲಿಯ ಕಾವಲುಬಂಟರಾದ ಕಾಮ-ಕ್ರೋಧಾದಿಗಳ ಬೆಂಗೋಲಿಂದ ಘಾಸಿಯಾಗಿ, ಸಂಸಾರದ ಕೆಸರಲ್ಲಿ ಕಾಲಿಟ್ಟು ಹೂತುಹೋಗಿ-ಒಡೆಯನಾದ ಶಿವನಿಗೆ ಅವಮಾನವಾಗುವ ರೀತಿಯಲ್ಲಿ ನಿಂದೆಗೆ ಒಳಗಾಗುವನು.
ಜೀವಪಶುವಿನ ಚಿತ್ರವಿದನ್ನು ಸಾಮಾನ್ಯ ಪಶುಚಿತ್ರದ ಹಿನ್ನೆಲೆಯಲ್ಲಿ ಮನೋಜ್ಞವಾಗಿ ಒಳವಿನ್ಯಾಸ ಮಾಡಿರುವರು ಬಸವಣ್ಣನವರು.
ಮೇಲೆ ಹೇಳಿದಂತೆ ಆತ್ಮತೇಜವಿನಾಶಕಾರಿಯಾದ ವಿಷಮದಿಂದ ಪಶುವಾದ ತಮ್ಮನ್ನು ಪಶುಪತಿಯಾದ ಶಿವನೇ ಉದ್ಧರಿಸಬಲ್ಲನೆನ್ನುತ್ತ-ಆ ಶಿವನನ್ನು ಬಸವಣ್ಣ ನವರು ಪ್ರಾರ್ಥಿಸುತ್ತಿರುವರು ವಿನಯಾಗ್ರಹದಿಂದ.
ಜೀವಕ್ಕಾಗುವ ಅಧಃಪತನ ಶಿವನಿಗಾದ ಅವಮಾನವೆನ್ನುತ್ತ-ಜೀವದ ಘನತರವಾದ ಜವಾಬ್ದಾರಿಯತ್ತ ಬಸವಣ್ಣನವರು ಲೋಕದ ಗಮನ ಸೆಳೆದಿರುವುದನ್ನು ಓದುಗರು ಈ ವಚನಸಂದರ್ಭದಲ್ಲಿ ಕಾಣಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.