ನೋಡಿ ನೋಡಿ ಮಾಡುವ ನೇಮ ಸಲ್ಲವು! ಸಲ್ಲವು!!
ತನುವುದ್ದೇಶ, ಮನವುದ್ದೇಶವಾಗಿ ಮಾಡುವ ನೇಮ ಸಲ್ಲವು! ಸಲ್ಲವು!!
ಗುರುಪಥವ ಮೀರಿ ಮಾಡುವ ನೇಮ ಸಲ್ಲವು! ಸಲ್ಲವು!!
ಕೂಡಲ ಸಂಗಮದೇವಯ್ಯಾ,
ಇವು ನಿಮ್ಮ ನಿಜದೊಳಗೆ ನಿಲ್ಲವು! ನಿಲ್ಲವು!!
Hindi Translationअंधानुकरण से आचरित नियम योग्य नहीं, योग्य नहीं;
शरीरार्थ, मनसार्थ आचरित नियम योग्य नहीं, योग्य नहीं;
गुरुपथ को अतिक्रमण कर आचरित नियम योग्य नहीं, योग्य नहीं;
कूडलसंगमदेव, ये तव यथार्थता में टिक नहीं सकते ॥
Translated by: Banakara K Gowdappa
English Translation In vain, in vain
The shallow, aped observances !
Those undertaken for the body's sake
Or mind's; observances
That go athwart the Guru's path !
O Kūḍala Saṅgama Lord,
Such have no place in Thee !
Translated by: L M A Menezes, S M Angadi
Tamil Translationகண்டு, கண்டு ஆற்றும் நெறிமை செல்லாது, செல்லாது,
உடலை முன்னிட்டு மனத்தை முன்னிட்டு,
ஆற்றும் நெறிமை செல்லாது, செல்லாது,
குருவழியை மீறும் நெறிமை செல்லாது, செல்லாது,
இவை உம் உண்மையிலே நில்லாது, நில்லாது
கூடல சங்கம தேவனே.
Translated by: Smt. Kalyani Venkataraman, Chennai
Telugu Translationచూచి చూచి నోచు నోము చెల్లదు చెల్ల దురా;
క%వ% తను మనముల నుద్దేశించి చేయు వ్రతము చెల్లదురా
గురుపథము మీరి చేయు వ్రతము చెల్లదు చెల్లదురా;
నిలువపురా ఇవి నీ నిలువన కూడల సంగయ్యా !
Translated by: Dr. Badala Ramaiah
ಕನ್ನಡ ವ್ಯಾಖ್ಯಾನಗುರು ತೋರಿದ ಮಾರ್ಗ(ಗುರುಪಥ)ದಲ್ಲಿ ಮುಂದುವರಿಯುವ ಚೈತನ್ಯದ ವರ್ಧನೆಗೆ ಅಡ್ಡಿಯಾಗುವುದನ್ನು ತ್ಯಜಿಸುವ,ಉತ್ತೇಜಕವಾದುದನ್ನು ಭಜಿಸುವ ಕಾಯಕ-ವಾಚಕ-ಮಾನಸಿಕ ವರ್ತನೆಗೆ ನೇಮವೆನ್ನುವರು.
ಸುಳ್ಳನ್ನು ಹೇಳುವುದಿಲ್ಲ, ಪರಾಂಗನೆಯರನ್ನು ಕಾಮಿಸುವುದಿಲ್ಲ, ಅನ್ಯದೈವವನ್ನು ಉಪಾಸಿಸುವುದಿಲ್ಲ ಎಂದು ಮುಂತಾದ ವ್ರತರೂಪದಲ್ಲಿಯೂ ಇರುವುದುಂಟು ಈ ನೇಮ.
ನೇಮವನ್ನು ಶಿಷ್ಯನಿಗೆ ದೀಕ್ಷೆ ಕೊಡುವಾಗಲೇ-ಕಾಯಕರೂಪದಲ್ಲಿ-ಇಂಥದು ನಿನ್ನ ನೇಮ ಎಂದು ಗುರು ನಿಗದಿಪಡಿಸುವುದೂ ಉಂಟು-ನೋಡಿ ಸಿದ್ಧರಾಮ ಚಾರಿತ್ರ 3-14:
ಉದಯವಪ್ಪಂದು ಕೂಡುತ್ತುಮಾಂಗದಲಿ ಮೂ
ಡಿದ ಗೂಢಲಿಂಗಮಂ ತೋರಿ ಪಂಚಾಕ್ಷರಿಯ
ಹೃದಯಮಂ ತಿಳಿಪಿ ನಿಜಭಕ್ತಿಯಂ ಗುರುಪೂಜೆಯಾಗಿ ಕೈಕೊಂಡು ಬಳಿಕ |
ಮೊದಲ ನಾಮವನೆ ದೀಕ್ಷಾನಾಮವಿತ್ತು ಭೂ
ತದಯಾವಿಚಾರಮಂ ನೇಮಮಂ ಕೊಟ್ಟು ನೋ
ಡಿದಡೆ ಕನ್ನಡಿಗೆ ಕನ್ನಡಿದೋರೆದಂತೆರಡನಳಿದಂದುವಿಡಿದಿರ್ದನು ||
ಹೀಗೆ ಗುರು ನಿಗದಿಪಡಿಸಿಕೊಟ್ಟ ನೇಮವನ್ನು ಬಿಟ್ಟು-ಅವರಿವರನ್ನು ನೋಡಿ-ತನ್ನ ಸ್ವಭಾವಕ್ಕೂ ಸಾಮರ್ಥ್ಯಕ್ಕೂ ಜೀವನ ಸಂದರ್ಭಕ್ಕೂ ಒಗ್ಗದ ನೇಮವಿನ್ನೊಂದನ್ನು-ಜನಮರುಳೋ ಜಾತ್ರೆಮರುಳೋ ಎಂಬಂತೆ-ಅನುಕರಿಸಬಾರದು, ಅಥವಾ ಹಾಲು ಚೆನ್ನ, ಹಾಲುಕೆನೆ ಇನ್ನೂ ಚೆನ್ನವೆಂದು ತನುಉದ್ದೇಶವಾಗಿಯೂ ನೇಮಗಳನ್ನು ಕೈಗೊಳ್ಳಬಾರದು ಅಥವಾ ಯಾವನಾದರೊಬ್ಬ ಯಾವುದಾದರೊಂದು ನೇಮ ಮಾಡುತ್ತ ಅತಿಶಯನೆನಿಸಿದರೆ-ನಾನೂ ಹಾಗೆ ಮಾಡುವೆನೆಂಬ ಮನ ಉದ್ದೇಶವಾಗಿಯೂ ನೇಮವನ್ನು ಅಚರಿಸಬಾರದು.
ಇಂಥ ನೇಮಗಳು ಸದ್ಭಕ್ತನಿಗೆ ನೈಜವಲ್ಲವಾಗಿ ನಿಷ್ಟ್ರಯೋಜಕ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.