Hindi Translationसुपथमंत्र का उपदेश सीखकर-
युक्तिशून्य व्यवहार करते हो,
तत्वमसि जानकर अंधकार से आवृत रहते हो
वेद- विप्रों से विचारकर देखनेपर उपदेश परीक्षा
कूडलसंगमदेव के वचनानुसार नायक नरक है ॥
Translated by: Banakara K Gowdappa
English Translation You learn the lesson of the righteous path,
And yet you act
With all decorum set aside ;
And when you have the light to know
'Thou art That', you
Repose in darkness none the less !
If you consider carefully,
Kūḍala Saṅga's vachana suggests-
The lessons and the tests of those
Who gloss the Scriptures, is arch-hell !
Translated by: L M A Menezes, S M Angadi
Tamil Translationநல்மந்திர அறிவுரையினைக்கற்று, அறிவற்று நடப்பீரையனே,
“தத்துவமஸி” என்பதையறிந்து அஞ்ஞானத்திற் கூடுவீரையனே
வேதியரைக் கேட்டுத் தெளிவது
அறிவுரை பெருமாராய்வு கீழ்நரகம் என
கூடல சங்கனின் பொன்மொழி இயம்புகிறதன்றோ.
Translated by: Smt. Kalyani Venkataraman, Chennai
Telugu Translationచక్కని మంత్రోపదేశమంది
యుక్తిచెడి నడచిరయ్యా :
‘తత్వమసి’ అన్నది తెలిసియూ
తమసంబులో బడిపోయిరయ్య,
వేదవిపుల విచారించి చూడ;
ఉపదేశ పరీక్ష మహానరక మనుచుండె
కూడల సంగయ్య వచనము.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಓಂಕಾರಪ್ರಣವದಲ್ಲಿ ಅಕಾರ-ಉಕಾರ-ಮಕಾರವೆಂಬ ಮೂರಂಶಗಳಿವೆ, ಅಕಾರವು ಲಿಂಗ(ಶಿವ)ವಾಚಿ, ಉಕಾರವು ಅಂಗ(ಜೀವ) ವಾಚಿ-ಇವೆರಡರ ಸಾಮರಸ್ಯವಾಚಕವೇ ಮಕಾರ,ಮತ್ತು ನಮಶ್ಯಿವಾಯದಲ್ಲಿರುವ ನಮಃ ಎಂಬುದು ಅಂಗವಾಚಿ,ಶಿವ ಎಂಬುದು ಲಿಂಗವಾಚಿ-ಈ ಅಂಗಲಿಂಗವೆರಡರ ಸಂಯೋಗವಾಚಿಯಾಗಿದೆ ಅಯ. ಹೀಗೆ ಓಂ ನಮಶ್ಯಿವಾಯವೆಂಬ ಶಿವಮಂತ್ರವು ಶಿವಜೀವಸಾಮರಸ್ಯವನ್ನೇ ಒತ್ತಿ ಹೇಳುತ್ತಿದೆ. ಹಾಗೆಯೇ ತತ್ತ್ವಮಸಿ ಎಂಬಲ್ಲಿಯೂ ತತ್ ಎಂದರೆ ಶಿವನು,ತ್ವಂ ಎಂದರೆ ಜೀವನು-ಅಸಿ ಎಂದರೆ ಉಭಯಸಮರಸ,ಇದನ್ನೆಲ್ಲ ಗುರು ದೀಕ್ಷಾಕಾಲದಲ್ಲಿ ಶಿಷ್ಯನಿಗೆ ಉಪದೇಶ ಮಾಡಿರುವನು.ಅದನ್ನು ನಂಬದೆ ವೇದವಿಪ್ರರ ಬಳಿ ಹೋಗಿ ತನಗೆ ಗುರು ಉಪದೇಶ ಮಾಡಿರುವುದು ಸರಿಯೋ ತಪ್ಪೋ ಎಂದು ಪರೀಕ್ಷಿಸಿ ಕೊಳ್ಳುವುದು ಅಸಂಗತ.
(ಓಂ ನಮಶ್ಯಿವಾಯ) ಮಂತ್ರ ಮತ್ತು (ತತ್ತ್ವಮಸಿ) ಮಹಾವಾಕ್ಯಗಳು ವೈದಿಕರಿಗೂ ಶಿವಶರಣ ಸಂಪ್ರದಾಯದವರಿಗೂ ಒಂದೇ ಆದರೂ ಅರ್ಥೈಸಿರುವ ರೀತಿ ಬೇರೆಬೇರೆಯಾಗಿರುವುದು.
ವಿಪ್ರರು ವೇದಪಂಡಿತರು-ಅವರು ಹೇಳಿದ್ದೇ ಸರಿ ಎಂಬುದೊಂದು ಮೂಢನಂಬಿಕೆ. ಅದನ್ನು ಅಲ್ಲಗಳೆಯುತ್ತಿರುವರು ಬಸವಣ್ಣನವರು.
ಜೀವನು ಶಿವನ ಅಂಶ-ಅವನು ಪಂಚಭೂತಗಳ ಪಂಚೀಕರಣದಿಂದ ನಿಷ್ಟನ್ನವಾದ ದೇಹವಲ್ಲ,ಪಂಚೇದ್ರಿಯಗಳ ಸಮೂಹವಲ್ಲ, ಅಂತಃಕರಣಚತುಷ್ಟಯಗಳ ಸಂಘಾತವೂ ಅಲ್ಲ, ಇವೆಲ್ಲದರ ಉಪಾಧಿಯಿಂದ ಜೀವನು ಶಿವಾಂಶವಲ್ಲವೆಂಬಂತೆ ತೋರುವನು, ಶರಣಸಿದ್ಧಾಂತದನುಸಾರ ಸಾಧನೆ ಮಾಡಿದ್ದೇ ಆದರೆ ಈ ಜೀವನು ಶಿವನೊಡನೆ ಸಂಯೋಗಗೊಂಡು ಸಮರಸವಾಗುವನು, ಇದು ಬಸವಣ್ಣನವರ ಸೈದ್ದಾಂತಿಕ ನಿಲವು. ಆ ಬಗ್ಗೆ ನಂಬಲು ಕರೆಯಿತ್ತಿದೆ ಜನರಿಗೆ ಈ ವಚನ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.