ಎನಿಸು ಕಾಲ ಕಲ್ಲು ನೀರೊಳಗಿರ್ದರೇನು,
ನೆನೆದು ಮೃದುವಾಗಬಲ್ಲುದೆ?
ಎನಿಸು ಕಾಲ ನಿಮ್ಮ ಪೂಜಿಸಿ ಏವೆನಯ್ಯಾ,
ಮನದಲ್ಲಿ ದೃಢವಿಲ್ಲದನ್ನಕ್ಕ?
ನಿಧಾನವ ಕಾಯ್ದಿರ್ದ ಬೆಂತರನಂತೆ!
ಅದರ ವಿಧಿಯೆನಗಾಯಿತ್ತು, ಕೂಡಲಸಂಗಮದೇವಾ.
Art
Manuscript
Music Courtesy:Album Name: Vachana Mandaara Song Name: Enisu Kaala Kallu Singers: Ambaiya Nuli Lyricist: Traditional Music: D. Srinivas Label: Jhankar Music
Hindi Translationअनंत काल जल में क्यों न रहे?
शिला उपल भीगकर कोमल बन सकता है?
अनंत काल तुम्हें पूजकर क्या करूँ?
जब कि मन में दृढ़ता नहीं है?
निधी की रक्षा करनेवाले पिशाच की सी
मेरी विधि है, कूडलसंगमदेव ॥
Translated by: Banakara K Gowdappa
English Translation Does it matter how long
a rock soaks in the water:
will it ever grow soft?
Does it matter how long
I've spent in worship,
when the heart is fickle?
Futile as a ghost
I stand guard over hidden gold,
O lord of the meeting rivers.
Translated by: A K Ramanujan Book Name: Speaking Of Siva Publisher: Penguin Books ----------------------------------
How long so ever a stone
May lie in water, can it
By soaking turn soft ?
However long I worship thee,
What boots it, if I lack
A resolute mind ?
My plight is like a spirit's
Guarding a treasure trove,
O Lord Kūḍala Saṅgama !
Translated by: L M A Menezes, S M Angadi
Tamil Translationஎத்துணைக்காலம் கல் நீரிலே கிடந்தாலென்
நனைந்து மென்மையாக வியலுமோ?
எத்துணைக்கால முமை வணங்கி என் செய்வேனையனே
மனத்திலே திட்ப மற்றவரையிலே?
புதையலைக் காத்திருந்த பூதம்போல
அதன்நிலை எனக் காயிற்றையனே.
Translated by: Smt. Kalyani Venkataraman, Chennai
Telugu Translationఎంతకాలము నీటిలోనున్న ఫలమేమి
శిలనాని మెత్తబడునే?
ఎంతకాలము నిన్ను పూజించి ఫలమేమి
మనసు దృఢము లేనంతదాక?
అయ్యయో! పెన్నిధి కాచుపిశాచి jైుపోయెనే
నా బ్రతుకు కూడల సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ತಾಮಸನಿರಸನಸ್ಥಲವಿಷಯ -
ಲಿಂಗನಿಷ್ಠೆ
ಶಬ್ದಾರ್ಥಗಳುನಿಧಾನ = ಉದಿಗಿಟ್ಟ ಹಣ; ಬೆಂತರ = ದೆವ್ವ ಭೂತ ಒಂದು ಬಗೆಯ ಪಿಶಾಚಿ; ವಿಧಿ = ಹಣೆ ಬರಹ;
ಕನ್ನಡ ವ್ಯಾಖ್ಯಾನದೃಢವಿಲ್ಲದ ಪೂಜೆ
ಜೀವನದಲ್ಲಿ ಯಶಸ್ವಿಯಾಗಬೇಕಾದರೆ ಒಂದು ದೃಢ ನಿರ್ಧಾರ ಅವಶ್ಯಕ. ಅಂತಹ ದೃಢನಿರ್ಧಾರವಿಲ್ಲದ ಚಂಚಲ ಮನಸ್ಸಿನ ವ್ಯಕ್ತಿಯು ಏನೂ ಸಾಧಿಸಲಾರ. ಇದರಂತೆಯೇ ದೇವರ ಒಲುಮೆಗೆ ಪಾತ್ರರಾಗಬೇಕಾದರೆ ನಾವು ಮಾಡುವ ಪೂಜೆಯ ಹಿಂದೆ ನಮ್ಮ ಮನಸ್ಸಿನಲ್ಲಿ ಆ ಪೂಜೆಯಿಂದ ದೇವರ ಒಲುಮೆಯನ್ನು ಗಳಿಸಿಯೇ ಗಳಿಸುತ್ತೇವೆಂಬ ಒಂದು ದೃಢತೆ ಇರಬೇಕು. ಇದನ್ನು ಬಿಟ್ಟು ಈ ಪೂಜೆಯಿಂದ ದೇವರ ಒಲುಮೆ ಆಗುವುದೋ ಇಲ್ಲವೋ ಎಂಬ ಸಂಶಯಕ್ಕೊಳಗಾಗಿ ನಿರಂತರ ಸಂಶಯಗ್ರಸ್ಥರಾಗಿಯೇ ಪೂಜಿಸುತ್ತಾ ಕುಳಿತರೆ ಅದರಿಂದ ಏನೂ ಫಲವಲ್ಲ. ಕಲ್ಲು ಎಷ್ಟೇ ಕಾಲ ನೀರಿನಲ್ಲಿದ್ದರೂ ನೆನೆದು ಮೃದುವಾಗಲು ಸಾಧ್ಯವೆ? ಏಕೆಂದರೆ ನೀರಿನಲ್ಲಿ ಮೃದುಗೊಳಿಸುವ ಶಕ್ತಿಯಿದ್ದರೂ ಕಲ್ಲಿನಲ್ಲಿರುವ ಕಾಠಿಣ್ಯದಲ್ಲಿ ಮೃದುವಾಗಬಲ್ಲ ಗುಣವೇ ಇಲ್ಲ. ಇದರಂತೆಯೇ ದೇವರ ಒಲುಮೆಯನ್ನು ದೊರಕಿಸಿಕೊಡುವ ಶಕ್ತಿಯು ಪೂಜೆಯಲ್ಲಿದ್ದರೂ ಮನದಲ್ಲಿ ದೃಢವಿಲ್ಲದ ಕಾರಣ ‘........... ನಿಧಾನವ ಕಾಯ್ದಿರ್ದ ಬೆಂತರನಂತೆ ಅದರ ವಿಧಿಯೆನಗಾಯಿತ್ತು ಕೂಡಲಸಂಗಮದೇವಾ’ ಎಂದು ಪರಿತಪಿಸುತ್ತಿದ್ದಾರೆ, ಬಸವಣ್ಣನವರು. ಭೂಮಿಯಲ್ಲಿ ಹೂತಿಟ್ಟ ಹಣವನ್ನು ಭೂತ ಯಾವಾಗಲೂ ಕಾಯುತ್ತಿರುತ್ತದೆಯೆಂದು ನಂಬಿಕೆ. ಭೂತಕ್ಕೆ ಆ ಹಣದಿಂದ ಪ್ರಯೋಜನವೂ ಇಲ್ಲ. ಹೀಗೆಂದ ಮಾತ್ರಕ್ಕೆ ಆ ಹಣವೇ ಯಾವ ಪ್ರಯೋಜನಕ್ಕೂ ಬಾರದೆಂದರ್ಥವಲ್ಲ. ಏಕೆಂದರೆ ಭೂತಕ್ಕೆ ಬದಲಾಗಿ ಯಾರಾದರೂ ಒಬ್ಬ ಮನಷ್ಯನಿಗೆ ಆ ಭೂಮಿಯಲ್ಲಿ ಹಣ ಹುದುಗಿರುವುದು ತಿಳಿದಿದ್ದರೆ ಅವನು ಅದನ್ನು ಅಗಿದು ಬಳಸಿಕೊಳ್ಳುತಿದ್ದ. ಆದ್ದರಿಂದ ಹಣದಿಂದ ಪ್ರಯೋಜನವಿದ್ದರೂ ಆಪ್ರಯೋಜನ ಒಬ್ಬ ಬುದ್ಧಿವಂತನಿಗೆ ಆಗುವುದೇ ಹೊರತು ಭೂತಕ್ಕಲ್ಲ. ಹಣವನ್ನು ಬಳಸಿಕೊಳ್ಳಲರಿಯದು ಆದರೂ ಅದನ್ನು ಕಾಯ್ದುಕೊಂಡಿರುವ ಭೂತದ ಕಾವಲು ವ್ಯರ್ಥವೇ ಸರಿ. ಹೀಗೆಯೇ ದೃಢ ಮನಸ್ಸಿನಿಂದ ಕೂಡಿದ ಪೂಜೆಯಲ್ಲಿ ದೇವರ ಒಲುಮೆಯ ಫಲವಿದೆ. ಆದರೆ ಅದಿಲ್ಲದ ಪೂಜೆ ಮಾತ್ರ ಭೂತದ ಕಾವಲಿನಂತೆ ವ್ಯರ್ಥವೇ ಆಗುವುದು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.