Hindi Translationपति शिवलिंग देव का भक्त है;
पत्नी क्षुद्र देवियों की भक्ता है
पति पाता है पादोदकप्रसाद-;
पत्नी पाती है माँसमदिरा-
जिनके भाँडभाजन शुद्ध नहीं-
उनकी भक्ती सुरा पात्र को
बाहर से धोने के समान है,
कूडलसंगमदेव ॥
Translated by: Banakara K Gowdappa
English Translation The husband venerates
Śivaliṅga divine ;
The wife's devotion is
For the goddess of graves !
The husband takes the Grace
From washing of the feet ;
The wife takes meat and wine !
The piety of those
Whose pots and pans are not kept clean
Is like the washing of a toddy-vat
But on the outer side,
O Kūḍala Saṅgama Lord !
Translated by: L M A Menezes, S M Angadi
Tamil Translationகணவன் சிவலிங்கபிரானின் பக்தன்,
மனைவி மாரிதேவதையின் பக்தை
கணவன் பெறுவது திருவடித் திருநீர் திருவமுது
மனைவி கொள்வது கள், ஊன் திருவமுது
அடுகலன், உண்கலன் தூய்மையற்றோர் தம் பக்தி
கள்ளுப் பானையினைப் புறத்தே மண்ணுதற்போல
கூடல சங்கம தேவனே.
Translated by: Smt. Kalyani Venkataraman, Chennai
Telugu Translationభర్త శివలింగ దేవుని భక్తుడు:
భార్య మారికి భక్తురాలు!
భర్త గైకొను పాదోదక ప్రసాదము
భార్యలో గొను సురమాంసము
బాండభాజన శుద్ధి లేని వారల భక్తి
కల్లుముంతను పై పై కడిగినట్లగు
కూడల సంగమ దేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ತಾಮಸನಿರಸನಸ್ಥಲವಿಷಯ -
ಆತ್ಮಶುದ್ಧಿ
ಶಬ್ದಾರ್ಥಗಳುಭಾಂಡ = ಪಾತ್ರೆ; ಭಾಜನ = ಅಡುಗೆ ಮಾಡುವ ಪಾತ್ರೆ, ಯೋಗ್ಯ; ಮಸಣಿ = ದುರ್ಗ ದೇವಿ ರೂಪ; ಮಾರಿ = ಕ್ಷುರ್ಧ ದೇವತೆ;
ಕನ್ನಡ ವ್ಯಾಖ್ಯಾನ ಬಸವಣ್ಣನವರ ಕಾಲಕ್ಕೆ ಒಂದೇ ಮನೆಯಲ್ಲಿ ಗಂಡ ಶಿವಧರ್ಮದವನಾದರೆ-ಹೆಂಡತಿ ಹಳೆಯ ಧರ್ಮದಲ್ಲಿ ಉಳಿಯುವ ಪ್ರಸಂಗವಿತ್ತು.
ದಾಂಪತ್ಯವನ್ನು ಒಳಹೊರಗೊಂದಾದ ಒಂದು ಗಡಿಗೆಗೆ ಹೋಲಿಸುವುದಾದರೆ ಹೆಂಡತಿ ಆ ಗಡಿಗೆಯ ಒಳಮೈ, ಗಂಡನು ಹೊರಮೈ. ಹೀಗೆ ಗಂಡಹೆಂಡಿರಿಬ್ಬರೂ ಒಂದೇ ವಸ್ತುವಿನ ಎರಡು ಮಗ್ಗುಲು ಈ ಪರಿಸ್ಥಿತಿಯಲ್ಲಿ ಹೆಂಡತಿಯಾದವಳು ಗಂಡನ ಭಕ್ತಿ ಜೀವನದಲ್ಲಿ ಸಹಭಾಗಿನಿಯಾಗಿರಬೇಕು.
ಹಾಗಲ್ಲದೆ ಗಂಡನೊಬ್ಬನೇ ಶಿವಭಕ್ತನಾಗಿ, ಹೆಂಡತಿ ಮಾರಿಮಸಣಿಯ ಭಕ್ತೆಯಾಗಿ ಹಳೆಯ ಕೊಳಕು ಧರ್ಮದಲ್ಲೇ ಉಳಿದರೆ ಅದು ಹೆಂಡದ ಮಡಕೆಯಾಗಿ-ಅದರ ಹೊರಮೈಯನ್ನು ಮಾತ್ರ ತೊಳೆದಂತಾಗಿ ನಾರುತ್ತಲೇ ಇರುವುದು.
ತಂದೆಯೊಂದು ಧರ್ಮ, ತಾಯೊಂದು ಧರ್ಮವಾಗಿ ಉಂಟಾಗುವ ಕಸಿವಿಸಿಯಿಂದ ಹುಟ್ಟುವ ಮಕ್ಕಳು ದಿಕ್ಕುತಪ್ಪುವರು.
ಈ ಸಂದರ್ಭದಲ್ಲಿ-“ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ, ಸತಿಪತಿಗಳೊಂದಾಗದವನ ಭಕ್ತಿ ಅಮೃತದೊಳು ವಿಷ ಬೆರಸಿದಂತೆ ಕಾಣಾ ರಾಮನಾಥ” ಎಂಬ ದೇವರ ದಾಸಿಮಯ್ಯನವರ ವಚನವನ್ನು ಉಲ್ಲೇಖಿಸಬಹುದು.
ಸತಿಪತಿಗಳೊಂದು ಧರ್ಮದವರಾಗುವುದು ಬಲಾತ್ಕಾರದ ಮಾತಲ್ಲ-ಅದು ಒಂದು ಒಪ್ಪಂದ. ಅಕ್ಕಮಹಾದೇವಿಯು ಶಿವಭಕ್ತನಾಗಲೊಲ್ಲದ ಕೌಶಿಕನನ್ನು-ಗಂಡನೇ ಆದರೂ (?) ತ್ಯಜಿಸಿ ಹೋದುದನ್ನಿಲ್ಲಿ ಸ್ಮರಿಸಬೇಕು. ದೇವರದಾಸಿಮಯ್ಯನವರಿಗೂ ಪೂರ್ವದವಳಾದ ವೈಜಕ್ಕವ್ವೆಯೆಂಬ ಮಾಹಾಶಿವಭಕ್ತಳು ಜೈನನೊಬ್ಬನನ್ನು ಮದುವೆಯಾಗಿ ಸಂಸಾರದಲ್ಲಿ ಸಾಮರಸ್ಯವಿಲ್ಲದೆ ಬಹಳ ಭಂಗಪಡಬೇಕಾಯಿತು.
ಒಂದು ಧರ್ಮದಲ್ಲಿ ಹಲವು ಜಾತಿಗಳನ್ನು ಬಗೆಯುವುದಾಗಲಿ, ಧರ್ಮಾಚರಣೆಯೇ ಇಲ್ಲದ ಜೀವನ ಅಥವಾ ಸಂಸಾರವನ್ನು ನಡೆಸುವುದೇ ಆಗಲಿ-ಬಸವಣ್ಣನವರಿಗೆ ಒಪ್ಪಿಗೆಯಿಲ್ಲವೆಂಬುದನ್ನೂ ಈ ವಚನ ಸಂದರ್ಭದಲ್ಲಿ ಮರೆಯಬಾರದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.