Hindi Translationचूल्हे की राख खरीदते तो नहीं
इच्छानुसार लगा सकते हैं
लगाने से क्या लाभ,
यदि मन शुद्धता न हो?
एक की जगह बकनेवाले
दंभियों पर प्रसन्न नहीं होते,
मम कूडलसंगमदेव ॥
Translated by: Banakara K Gowdappa
English Translation You need not buy the ash
That's found in the hearth :
You smear it as you please !
But what price smearing unless
There is good in your heart ?
Lord Kūḍala Saṅgama
Approves not the braggarts who
Protest too much !
Translated by: L M A Menezes, S M Angadi
Tamil Translationஉலையின் நீற்றை விலையீந்து கொள்ளற்க
அன்பிருப்பதைப் போல பூசுவது
பூசிஎன்ன பயன், மனத்திலே நன்மையற்ற வரை?
ஒன்றாடவந்து ஒன்பதாடும் பகட்டினரை நயவான்
கூடல சங்கம தேவன்.
Translated by: Smt. Kalyani Venkataraman, Chennai
Telugu Translationపొయ్యినిబడు బూది కొనబోకుర ;
పూసికొనవచ్చు వలచినట్లు
పూసి ఫలమేమి మనసున మంచి లేనంతదాక?
ఒకటికి పది వాగెడి డాంభికుల
మెచ్చడు కూడల సంగమ దేవుడు.
Translated by: Dr. Badala Ramaiah
ಕನ್ನಡ ವ್ಯಾಖ್ಯಾನಬ್ರಾಹ್ಮಣನ ಅಡುಗೇಮನೆಯ ಒಲೆಯ ಬೂದಿಯನ್ನು ಶೂದ್ರಾದಿಗಳು ಧರಿಸಬೇಕೆಂದು ಆ ಶಿಷ್ಟರು ನಿಗದಿಮಾಡಿದ್ದರು. ಅದನ್ನು ಬಸವಣ್ಣನವರು ಪ್ರತಿಭಟಿಸಿ-ಲಿಂಗದೀಕ್ಷೆಯಿಂದ ಶಿವಧರ್ಮಕ್ಕೆ ಸೇರಿದವರಿಗೆ-ಆ “ಒಲೆಯ ಬೂದಿಯ ಬಲಿಯಲು ಬೇಡ” ಎಂದು ನಿಷೇದಿಸಿರುವರು.
ಮತ್ತು ಶಿಷ್ಟರು ಧರಿಸುವ ಭೂತಿ-ಭಸಿತ-ಭಸ್ಮ-ಕ್ಷಾರ-ರಕ್ಷಾ ಎಂಬ ಈ ಐದೂ ಬಗೆಯ ವಿಭೂತಿಯನ್ನು ಸಮಯೋಚಿತವಾಗಿ ಧರಿಸಲು ಶೂದ್ರಾದಿಗಳೂ ಅರ್ಹರೆನ್ನಲು “ಒಲಿದಂತೆ ಪೂಸಿಕೊಂಡಿಪ್ಪುದು” ಎಂದು ವಿಧಿಸಿರುವರು.
ಪಾಪ ಮಾಡಿದವರು ಏನನ್ನು ತಾನೇ ಧರಿಸಿ ಪ್ರಯೋಜನವೇನು ? ಶಿವಧರ್ಮಕ್ಕೆ ಸೇರಿದ ಶೂದ್ರಾತಿ ಶೂದ್ರರೂ ಶುಭಾಶಯವುಳ್ಳವರಾದುದರಿಂದ-ನಮಶ್ಶಿವಾಯ ಮಂತ್ರಪುರಸ್ಸರವಾಗಿ ಭೂತಿಭಸ್ಮಾದಿಗಳನ್ನು ಧರಿಸಲು ಹಿಂತೆಗೆಯಬೇಕಾಗಿಲ್ಲವೆಂದು ಅವರಿಗೆ ಧೈರ್ಯ ತುಂಬುತ್ತಿರುವರು. ಒಂದಕ್ಕೆ ಒಂಬತ್ತಾಡುವ-ಆ ಮೂಲಕ ಸತ್ಯವನ್ನು ಮರೆಮಾಚುವ ತಾರತಮ್ಯ ಬುದ್ಧಿಯ ಸಂಪ್ರದಾಯಸ್ಥರು ಶಿವನಿಗೆ ಪ್ರಿಯರಲ್ಲ ಎಂಬುದನ್ನು ಈ ವಚನದಲ್ಲಿ ಬಸವಣ್ಣನವರು ಒತ್ತಿ ಹೇಳುತ್ತಿರುವರು.
ವಿ ; ಈಶ್ವರನ “ಭೂತಿ”(ಇರುವಿಕೆ)ಯನ್ನು ವಿಶೇಷವಾಗಿ ಪಡೆದಿರುವಂಥದು ವಿಭೂತಿ, ಶಿವನ ತೇಜಸ್ಸನ್ನು ಪ್ರತಿಫಲನಗೊಳಿಸುವುದು ಭಸಿತ. ಪಾಪಗಳನ್ನು ದಹಿಸುವುದು ಭಸ್ಮ, ಮಾಯಾಮಲವನ್ನು ತೊಳೆಯುವುದು ಕ್ಷಾರ, ಭೂತಪ್ರೇತಾದಿ ದುಷ್ಟಶಕ್ತಿಗಳನ್ನು ಉಚ್ಚಾಟಿಸುವುದು ರಕ್ಷೆ. ಇವನ್ನು ಕ್ರಮವಾಗಿ ಕಪಿಲವರ್ಣದ ನಂದೆಯೆಂಬ, ಕೃಷ್ಣವರ್ಣದ ಭದ್ರೆಯೆಂಬ, ಧವಲ ವರ್ಣದ ಸುರಭಿಯೆಂಬ, ಧೂಮ್ರವರ್ಣದ ಸುಶೀಲೆಯೆಂಬ, ರಕ್ತವರ್ಣದ ಸುಮನೆಯೆಂಬ ಬೇರೆ ಬೇರೆ ಬಣ್ಣದ ಹಸುಗಳ ಸಗಣಿಯಿಂದ ವಿಧಿಯುಕ್ತವಾಗಿ ತಯಾರಿಸುವರು.
ಸಗಣಿಯನ್ನು ಉಂಡೆಕಟ್ಟುವುದು, ಒಣಗಿಸುವುದು, ಸುಡುವುದು, ಶೋಧಿಸುವುದು ಮುಂತಾದ ಕ್ರಿಯೆಗಳು ವಿಭೂತಿಯನ್ನು ತಯಾರಿಸುವ ಕೆಲವು ಹಂತಗಳು. ಇದನ್ನು ನೆತ್ತಿ (1) ಹಣೆ (2) ಕಿವಿ (3-4) ಕೊರಳು (5) ಭುಜ (6-7) ಎದೆ (8) ನಾಭಿ (9) ಬೆನ್ನು (10) ತೋಳು (11-12) ಕುಕುದ್ (ಹೆಕ್ಕತ್ತು 13) ಮಣಿಕಟ್ಟು (14-15) ಎಂಬ ಹದಿನೈದು ಸ್ಥಾನಗಳಲ್ಲಿ ತ್ರಿಪುಂಡ್ರವಾಗಿ ಧರಿಸುವುದು. ಬಸವಣ್ಣನವರ ಪ್ರಕಾರವಾಗಿಯಾದರೋ ಹಣೆಯಲ್ಲಿ ಮೂರೆಳೆ ವಿಭೂತಿಯಿರುವುದು ಮುಖ್ಯ.
ವಿಭೂತಿಯನ್ನು ಬಲಗೈಯ ಮಧ್ಯದ ಮೂರು ಬೆರಳಿಂದ ಹಣೆಯ ಮೇಲೆ ಹುಬ್ಬಿಂದ ಹುಬ್ಬಿನವರೆಗೆ ಆರಂಗುಲ ಉದ್ದವಾಗಿ ಧರಿಸಬೇಕು-ಎಡದಿಂದ ಬಲಕ್ಕೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.