ಬಸವಣ್ಣ   
Index   ವಚನ - 123    Search  
 
ಗಿಳಿಯೋದಿ ಫಲವೇನು? ಬೆಕ್ಕು ಬಹುದ ಹೇಳಲರಿಯದು! ಜಗವೆಲ್ಲವ ಕಾಂಬ ಕಣ್ಣು: ತನ್ನ ಕೊಂಬ ಕೊಯಿಲೆಯ ಕಾಣಲರಿಯದು! ಇದಿರ ಗುಣವ ಬಲ್ಲೆವೆಂಬರು: ತಮ್ಮ ಗುಣವನರಿಯರು, ಕೂಡಲಸಂಗಮದೇವಾ.