Hindi Translationपूर्ण विश्वास रखो, पूर्ण विश्वास रखो,
आधिक्य के बिना सामवेदियों के समान
पूर्ण विश्वास रखो, पूर्ण विश्वास रखो
दास दुग्गळे के समान,
पूर्ण विश्वास रखो, पूर्ण विश्वास रखो
सिरियाळ चंगळे के समान
पूर्ण विश्वास रखो, पूर्ण विश्वास रखो
सिंधु बल्लाळ के समान-
विश्वास करो तो कूडलसंगमदेव अपने को अर्पित करेंगे॥
Translated by: Banakara K Gowdappa
English Translation Believe in Him with constancy,
Without excess,
As Samavedi did.
Believe in Him with constancy,
As Dāsa and Duggale did.
Believe in Him with constancy
Like Siriyāḷa and Ceṅgaḷē .
Believe in Him with constancy
As Sindhu Ballāḷa did.
Lord Kūḍala Saṅgama
Offers Himself to those
Who will believe in Him.
Translated by: L M A Menezes, S M Angadi
ಕನ್ನಡ ವ್ಯಾಖ್ಯಾನಜೀವನು ಶಿವನಾಗಿರುವುದಕ್ಕೆ ಕಾರಣವೆಂದರೆ-ಆ ಜೀವನಲ್ಲಿ ತಾನು ಶಿವನಾಗಬಲ್ಲೆನೆಂಬ ಆತ್ಮ ವಿಶ್ವಾಸವಿಲ್ಲದಿರವುದೇ ಆಗಿದೆ. ಶಿವನ ಒಂದು ಅಂಶವಾಗಿ ಅವತರಿಸಿರುವೆನಾಗಿ-ಮರಳಿ ನಾನು ಶಿವನಲ್ಲಿಯೇ ಒಂದಾಗಬಲ್ಲೆನೆಂಬ ಕಡುನಂಬಿಕೆ ಮುಮುಕ್ಷುಗೆ ಇರಬೇಕಾದ ಬಹಳ ಮುಖ್ಯವಾದ ಗುಣ. ಹೀಗೆ ನಂಬಿ ಉದ್ಧಾರವಾದ ಪೂರ್ವಕಾಲದ ಕೆಲವು ಶಿವಶರಣರ ಹೆಸರುಗಳನ್ನು ಬಸವಣ್ಣನವರು ಉಲ್ಲೇಖಿಸಿ ಅವರಂತೆ-ಯಾರೂ ನಂಬಿ ಉದ್ಧಾರವಾಗಬಹುದೆಂದು ಎಲ್ಲರಿಗೂ ಧೈರ್ಯ ಹೇಳುತ್ತಿರುವರು.
ಸಾಮವೇದಿಯೆಂಬ ಒಬ್ಬ ಮಹಾಬ್ರಾಹ್ಮಣ ಯಜ್ಞಯಾಗಾದಿಗಳಲ್ಲಿ ಪರಿಣಿತನಾಗಿದ್ದ, ಆಕಾಶಗಮನಾದಿ ಸಿದ್ಧಿಗಳನ್ನೂ ಪಡೆದಿದ್ದ. ಅಂಥವನು-ತನ್ನ ಜೀವನದ ಒಂದು ಸುಮುಹೂರ್ತದಲ್ಲಿ-ಜಾತಿಯಿಂದ ಚಮ್ಮಾರನಾದರೂ ಮಹಾಶಿವಾನುಭಾವಿಯಾದ ಶ್ವಪಚಯ್ಯನೆಂಬವನನ್ನು ಗುರುವೆಂದು ನಂಬಿದ-ಪರಮ ಪದವಿಯನ್ನು ಪಡೆದ. ದೇವರ ದಾಸಿಮಯ್ಯ ಅವನ ಹೆಂಡತಿ ದುಗ್ಗಳೆ, ಸಿರಿಯಾಳ ಅವನ ಹೆಂಡತಿ ಚೆಂಗಳೆ, ಸಿಂಧುಬಲ್ಲಾಳ (ಅವನ ಹೆಂಡತಿ ಯಾರೆಂದು ತಿಳಿಯದು)-ಇವರೆಲ್ಲರೂ ಶಿವಭಕ್ತರನ್ನು ಶಿವನೆಂದೇ ನಂಬಿದರೂ-ಪರಮಪದವಿಯನ್ನು ಪಡೆದರು. ನಂಬಲರ್ಹವಾದ ಶಿವಭಕ್ತರನ್ನು ನಿಸ್ಸಂಶಯವಾಗಿ ನಂಬಿದರೆ ಶಿವನೊಲಿಯುವುದು ನಿಶ್ಚಯ. (ಧರಧುರವೆಂದರೆ ಹೇವರಿಕೆ, ಹಿಂಜರಿಕೆ). ಶಿವಧರ್ಮದ ಬಗ್ಗೆ ಮತ್ತು ಶಿವಶರಣರ ಬಗ್ಗೆ ಸಾಮವೇದಿಯಂತೆ ವಿಶ್ವಾಸ ತಳೆಯಲು ಬ್ರಾಹ್ಮಣರನ್ನೂ ಆಹ್ವಾನಿಸುತ್ತಿರುವಂತಿದೆ ಬಸವಣ್ಣನವರು-ಈ ವಚನದ ಮೂಲಕ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.