ತನುವ ಕೊಟ್ಟು ಗುರುವನೊಲಿಸಬೇಕು;
ಮನವ ಕೊಟ್ಟು ಲಿಂಗವನೊಲಿಸಬೇಕು;
ಧನವ ಕೊಟ್ಟು ಜಂಗಮವನೊಲಿಸಬೇಕು.
ಈ ತ್ರಿವಿಧವ ಹೊರಗು ಮಾಡಿ,
ಹರೆಯ ಹೊಯಿಸಿ, ಕುರುಹ ಪೂಜಿಸುವವರ ಮೆಚ್ಚ
ಕೂಡಲಸಂಗಮದೇವ.
Hindi Translationतन देकर गुरु को प्रसन्न करना चाहिए
मन देकर लिंग को प्रसन्न करना चाहिए
धन देकर जंगम को प्रसन्न करना चाहिए
इन तीनों को छोड नगाडा बजाकर
मूर्ति पूजा करनेवालों पर
कूडलसंगमदेव प्रसन्न नहीं होते ॥
Translated by: Banakara K Gowdappa
English Translation Offering your body, you should
Endear yourself to Guru;
Offering your heart, you should
Endear yourself to Liṅga ;
Offering your wealth, you should
Endear yourself Jaṅgama...
Lord Kūḍala Saṅgama loves not
Those who, without these three,
Beat hard the kettle-drum
And worship a mere sign.
Translated by: L M A Menezes, S M Angadi
Tamil Translationஉடலையீந்து குருவிற்குத் தொண்டு புரிவாய்
மனத்தையீந்து இலிங்கத்திற்குத் தொண்டு புரிவாய்
பொருளையீந்து அடியார் தொண்டு புரிவாய்
இம்மூன்றையும் புறக்கணித்து
பறைமுழங்க பறைசாற்றி வணங்குவோரை
நயவான், கூடல சங்கம தேவன்.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಲಿಂಗದೀಕ್ಷೆಕೊಟ್ಟವನೂ, ಅಕ್ಷರ ಕಲಿಸಿ ಜ್ಞಾನಮಾರ್ಗತೋರಿದವನೂ ಗುರು. ಅವನು ತನ್ನೊರಲ್ಲೇ ಇರುವನು, ಅವನಿಗೆ ಶ್ರಮದಾನಪೂರ್ವಕವಾಗಿ ಸೇವೆ ಮಾಡಬೇಕು, ಜಂಗಮವು ನಿಂತಲ್ಲಿ ನಿಲ್ಲದೆ ಸದಾ ಸಂಚಾರಶೀಲನಾಗಿ ಸಮಾಜದ ಅಭಿವೃದ್ಧಿಗೆ ಯೋಜನೆಗಳನ್ನು ಹಾಕುತ್ತಿರುವನು. ಅಂಥವನಿಗೆ-ಮನೆಗೆ ಬಂದಾಗ-ಧನವನ್ನು ಕೊಡಬೇಕು. ಹೀಗೆ ಗುರುವಿನ ಮತ್ತು ಜಂಗಮದ ಸೇವೆಯನ್ನು ಮಾಡುವ ನಿಶ್ಚಲ ಸದ್ಬುದ್ಧಿಯನ್ನು ಕೊಡೆಂದು ಲಿಂಗಕ್ಕೆ ಮನನಟ್ಟು ಧ್ಯಾನಮಾಡಬೇಕು.
ಈ ಧ್ಯಾನ-ದಾನ-ಶ್ರಮದಾನವೇನೊ ಇಲ್ಲದೆ-ಗುರು ಕೊಟ್ಟ ಲಿಂಗದ ಕಲ್ಲನ್ನು ಧಾಂಧೂಂ ಪೂಜಿಸಿದರೇನು ಪ್ರಯೋಜನ ? ಗುರು ಶಿಷ್ಯನ ಕೈಗೆ ಲಿಂಗವನ್ನು ಕೊಟ್ಟಿದ್ದು-ಗುರುಹಿರಿಯರ ಮತ್ತು ಜನರ ಸೇವೆಯನ್ನು ಮಾಡಲು ಬೇಕಾದ ಪೂರ್ಣವ್ಯಕ್ತಿತ್ವವನ್ನು ಕುರಿತು ಭಕ್ತನು ಧ್ಯಾನಿಸಲಿ, ಅದನ್ನು ಸಿದ್ಧಿಸಿ ಕೊಳ್ಳಲಿ ಎಂದು. ಅದೇ ಇಲ್ಲದ ಮೇಲೆ ಮಿಕ್ಕುದೆಲ್ಲಾ ಲೋಕವನ್ನು ದಾರಿತಪ್ಪಿಸುವ ಆಡಂಬರವಷ್ಟೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.