Hindi Translationआइए, क्या सब कुशल है
कहने पर तुम्हारे सौंदर्य का ह्रास होगा?
‘बैठिए’ कहने पर धरती धँस जायेगी?
तत्क्षण बोलने पर सिर और पेट फट जायेंगे?
कुछ न देने पर भी एक गुण भी न हो,
तो कूडलसंगमदेव तुम्हें गिराकर नाक काटना छोडेंगे?
Translated by: Banakara K Gowdappa
English Translation Does it make you ugly if you say
'Come right in , how do you do ! ?
Does your floor cave in when you say
'Do sit down, please'?
Or does your head, or belly, burst
If only you speak to one?
If you have nothing to give, not even a grace,
Lord Kūḍala Saṅgama, be sure,
Will pull you down and chop your nose!
Translated by: L M A Menezes, S M Angadi
Tamil Translationவாரும் நலமாயுள்ளீரோ எனின்
உம் செல்வம் பறந்துபோமோ?
“இரீர்” எனின் நிலம் குழியாகிப் போமோ?
உடனே மொழியின் தலையும், வயிறு முடைந்து போமோ?
அளியாதொழியினும் நல்லியல்பிலையேல்
மூக்கைக் கொய்யானோ கூடல சங்கம தேவன்?
Translated by: Smt. Kalyani Venkataraman, Chennai
Telugu Translationరా రండేమికావలె సుఖముంటిరే యన
ఆరిపోవునే మీమేని సిరి;
కూర్చొనుడన ధర క్రుంగిపోవునే?
తక్షణమె బల్క తల బ్రద్దలగునే?
లేమియున్న ఒకటి గుణము లేకయున్న
పడవైచి ముక్కుకోయక మానునే?
కూడల సంగమదేవుడు.
Translated by: Dr. Badala Ramaiah
Urdu Translationجب بھی آئےتمھارے پاس کوئی
دوقدم بڑھ کےاس کولینےسے
اورپھرپوچھنےسےخیریّت
آبروپہ نہ داغ آئے گا
اورہمسایہ کےلئے اٹھ کر
اپنی مسَند کے پیش کرنے سے
یہ زمیں توسرک نہ جائےگی
حُرفِ شیریں زباں پہ لانے سے
سرپھٹے گانہ پیٹ پھُولے گا
ہونہ خیرات بھی اگرتم سے
اچھّی سیرت تواختیارکرو
جبکہ اس کا ثواب ملتا ہے
ہاںسنو،غورسےسنومجھ کو
جب نہ کردارمیں طہارت ہو
ناک کٹ جائےگی زمانےمیں
اورتم کو ملےگی خوب سزا
کوڈلا سنگما کی جانب سے
Translated by: Hameed Almas
ಕನ್ನಡ ವ್ಯಾಖ್ಯಾನಬಂದವರೊಡನೆ ವಿನಯವಾಗಿರಬೇಕು
ಮನೆಗೆ ಬಂದವರನ್ನು ಸತ್ಕರಿಸುವುದು ಭಾರತೀಯ ಸಂಪ್ರದಾಯದಲ್ಲಿ ಅವ್ಯಾಹತವಾಗಿ ನಡೆದು ಬಂದಿರುವ ಒಂದು ಶಿಷ್ಟಾಚಾರ. 'ಅತಿಥಿ ದೇವೋಭವ' ಎಂದು ಮನೆಗೆ ಬಂದ ಅತಿಥಿಯನ್ನು ದೇವರೆಂದೇ ಕರೆದರು ನಮ್ಮ ಹಿರಿಯರು. ಅಹಂಕಾರದಿಂದ, ಐಶ್ವರ್ಯ ಮದದಿಂದ ಮೇರೆ ಮೀರಿದ ಸಿರಿವಂತರು ಈ ಶಿಷ್ಟಾಚಾರವನ್ನು ಉಪೇಕ್ಷಿಸಿದರೆ ಅಂಥವರನ್ನು ಕಂಡು ಅಣ್ಣನವರು ಮನೆಗೆ ಬಂದ ಅತಿಥಿ ಅಭ್ಯಾಗತರನ್ನು ಏನು ಬಂದಿರಿ, ಸುಖದಿಂದಿರುವಿರಾ? ಎಂದು ಕುಶಲ ಪ್ರಶ್ನೆ ಮಾಡಿದರೆ ನಿಮ್ಮ ಘನತೆ, ಗೌರವವೇನು ಬಿದ್ದು ಹೋಗುತ್ತದೆಯೇ? ಎಂದು ಕೇಳುತ್ತಾರೆ. ಬಂದವರನ್ನು ವಿನಯದಿಂದ 'ಕುಳಿತುಕೊಳ್ಳಿ' ಎಂದರೆ ನಿಮ್ಮ ಮನೆಯ ನೆಲದಲ್ಲಿ ತಗ್ಗು ಬೀಳುವುದೇ? ಎಂದು ಪ್ರಶ್ನಿಸುತ್ತಾರೆ. ಬಂದವರೊಡನೆ ನಾಲ್ಕು ಕುಶಲ ಮಾತುಗಳನ್ನು ಆಡಿದರೆ ನಿಮ್ಮ ತಲೆ, ಹೊಟ್ಟೆ ಏನಾದರೂ ಒಡೆದು ಹೋಗುವುದೇ? ಎಂದು ಕಟಕಿಯಾಡುತ್ತಿದ್ದಾರೆ. ಬಂದವರಿಗೆ ಕೊಡುವುದೇನೂ ಬೇಡ, ಅವರ ಬಗ್ಗೆ ವಿನಯ ವಿಶ್ವಾಸದ ನಾಲ್ಕು ಮಾತುಗಳನ್ನಾಡುವ ಒಂದು ಒಳ್ಳೆಯ ಗುಣವೂ ಇಲ್ಲದಿದ್ದರೆ ಕೂಡಲ ಸಂಗಮದೇವ ಅಂಥವನನ್ನು ಕೆಡಹಿ ಮೂಗ ಕೊಯ್ಯದೆ ಬಿಡುವನೇ ಎಂದರೆ ಅವನ ಅಹಂಕಾರಕ್ಕೆ ತಕ್ಕ ಶಾಸ್ತಿ ಮಾಡದೇ ಬಿಡುತ್ತಾನೆಯೇ ಎಂದು ಮೂದಲಿಸುತ್ತಿದ್ದಾರೆ.
ಈ ರೀತಿ ನಡೆಯ ಕಲಿಸಿದ ಅಣ್ಣ ಉಣ್ಣುವುದನ್ನೂ ಈ ಮುಂದಿನ ವಚನದಲ್ಲಿ ಕಲಿಸಿದ್ದಾನೆ.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.