Hindi Translationयदि सैनिक भाग जाय
तो सेनानी के लिए कलंक है:
युद्ध कराओ विजयी बनाओ मुझे,
युद्ध कराओ विजयी बनाओ कूडलसंगमदेव,
मेर तन-मन-धन का छल छुडाकर ॥
Translated by: Banakara K Gowdappa
English Translation If the warrior runs away,
His master bears the shame:
You make me fight and win;
You make me fight and win,
O Kūḍala Saṅgama Lord,
By clearing all I am and have
Of fraud!
Translated by: L M A Menezes, S M Angadi
Tamil Translationவீரன் புறமுதுகிடுதல் உடையனுக்கு
இழுக்கு ஐயனே
போராடி எனை வெல்லச் செய்வாயையனே
போராடி வெல்லச் செய்வாயையனே
கூடல சங்கம தேவனே, என்
உடல், மனம், செல்வத்திலே ஏய்ப்பின்றி.
Translated by: Smt. Kalyani Venkataraman, Chennai
Telugu Translationభటుడ్నోడి పారిన స్వామికి భంగమయ్యా
పోర గెలిపింపుమయ్యా నన్ను
పోరి గెలిపింపుమా కూడల సంగమదేవా;
నా తను-మను-ధనములు వంచనగానట్లు
Translated by: Dr. Badala Ramaiah
ಕನ್ನಡ ವ್ಯಾಖ್ಯಾನತನು ಮನ ಧನವನ್ನು ಗುರು ಲಿಂಗ ಜಂಗಮಕ್ಕೆ ಪಣವಾಗಿಟ್ಟು ದಾಸೋಹ ಸಂಗ್ರಾಮದಲ್ಲಿ ತಮ್ಮ ಧರ್ಮವೀರವನ್ನು ಮೆರೆಯಲು ಶಕ್ತಿಮೀರಿ ಶ್ರಮಿಸುವುದಾಗಿಯೂ-ಅದನ್ನು ಈಡೇರಿಸಲಾಗದ ದುರ್ಭರ ಸಂಕಷ್ಟ ಒದಗಿದ ಪಕ್ಷಕ್ಕೆ-“ಈ ನನ್ನ ಆಳು ಸೋತರೆ ಅವಮಾನ ನನ್ನದಲ್ಲವೇ” ಎಂದು ಮಮತೆಯಿಂದ ನೀನೇ ನನ್ನ ಮನಭಾವಪ್ರಾಣದಲ್ಲಿ ಶಕ್ತಿಯಾಗಿ ನಿಂತು ಹೋರಾಡಿ ಗೆಲಿಸಬೇಕು-ಎಂದು ಬಸವಣ್ಣನವರು ಆ ದೇವರನ್ನು ಪ್ರಾರ್ಥಿಸಿಕೊಳ್ಳುತ್ತಿರುವರು.
ಯೋಧನು ಕಾದಲಾರದೆ ಹಿಮ್ಮೆಟ್ಟುವ ದುರ್ಘಳಿಗೆ ಬಂದರೆ-ಅವನ ಒಡೆಯನು ತಾನೇ ಬಂದು ಕಾದಾಡಿ-ಆ ಯೋಧನನ್ನು ಗೆಲುಸುವಂಥ ಯುದ್ಧ ಸಂಪ್ರದಾಯವನ್ನು ನಾವಿಲ್ಲಿ ನೆನೆಯಬೇಕು.
ದಾಸೋಹ ಸಂಗ್ರಾಮದಲ್ಲಿ ಗೆಲ್ಲುವುದೆಂದರೆ ಅಲ್ಲಿನಿಯುಕ್ತನಾದ ಭಕ್ತಯೋಧನು ತನ್ನ ತನು ಮನ ಧನವನ್ನು ಲೋಕಕ್ಕೆ ನಿಶ್ಯೇಷವಾಗಿ ವೆಚ್ಚಮಾಡಲು ಅಡ್ಡಿಯಾಗಿ ಬರುವ ಆಶೆ ಮುಂತಾದ ದೌರ್ಬಲ್ಯಗಳನ್ನು ಎದುರಿಸಿ ಹಿಮ್ಮೆಟ್ಟಿಸಿ ಜಯಶಾಲಿಯಾಗಬೇಕು-ಅದಕ್ಕೆ ಶಿವಕೃಪೆ ಬೇಕೆಂಬುದಭಿಪ್ರಾಯ.
ಮತ್ತು ಈ ಭಕ್ತನು ಮಾಡುವ ದಾಸೋಹಕಾರ್ಯಕ್ಕೆ ಯಜಮಾನ ಶಿವನೆಂದೂ, ತಾನು ದುಡಿಯುವ ಆಳು ಮಾತ್ರವೆಂದೂ ಬಸವಣ್ಣನವರು ಭಾವಿಸಿರುವುದು ಗಮನಾರ್ಹವಾಗಿದೆ, ಈ ದಾಸೋಹಂ ಮನೋಭಾವವೇ ದಾಸೋಹದ ಜೀವಾಳ.(ಅಂಕ : ಯೋಧ, ತೆತ್ತಗ : ಒಡೆಯ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.