Hindi Translationबाण मयूर की भाँति
स्तुति कर सकता हूँ?
सिरिताळ की भाँति
भोजन करा सकता हूँ?
दासिमय्या की भाँति
वस्त्र पहना सकता हुँ?
खा-पीकर दो, तो
उपहार का उपहार हुआ।
मुझे दो, तो दान होगा
कूडलसंगमदेव ॥
Translated by: Banakara K Gowdappa
English Translation Can I praise Thee
Like Bāṇa and Mayūra?
Can I feed Thee
Like Siriyāḷa ?
Can I give Thee to wear
Like Dāsimayya ?
When Thou gave'st them a grace
For food and cloth,
It was but exchange of gifts:
It would be real charity
If Thou just gave'st it to me,
O Kūḍala Saṅgama Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationబాణమయూరుల వలె వర్ణింపనగునే?
సిరియాళుని వలె తినిపింపనగునే?
దాసయ్య వలె చీర కట్టింపగలనే?
తిన, కట్ట, పెట్టిన, సరికి సరిjైు పోయెగాని
నాకు పెట్టినచో నీకు ధర్మమయ్య సంగయ్యా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಇಟ್ಟ ಒಂದು ಊಟಕ್ಕೆ, ಕೊಟ್ಟ ಒಂದು ಬಟ್ಟೆಗೆ ಶಿವನು ಮುಕ್ತಿಯನ್ನು ಸಿರಿಯಾಳ ಮತ್ತು ದಾಸಿಮಯ್ಯಗಳಿಗೆ ಕರುಣಿಸಿದ, ಕಟ್ಟಿ ಹಾಡಿದ ಒಂದು ಸ್ತೋತ್ರಗದ್ಯಕ್ಕೆ ಮತ್ತು ಒಂದು ಭಕ್ತಿಶತಕಕ್ಕೆ ಬಾಣ ಮತ್ತು ಮಯೂರ ಕವಿಗಳಿಗೆ ಶಿವನು ಮುಕ್ತಿಯನ್ನು ಕರುಣಿಸಿದ-ಎನ್ನುತ್ತ ಆ ಶಿವಶರಣರಿಗೆ ಶಿವನು ಒಲಿದಿದ್ದು ಅವರ ಮೇಲಣ ಕೇವಲ ಕೃಪೆಗಾಗಿಯಲ್ಲ-ಅವರ ಅನ್ನಕ್ಕೆ ಬಟ್ಟೆಗೆ ಬಣ್ಣನೆಯ ಮಾತಿಗಾಗಿ-ಮುಯ್ಯಿಗೆ ಮುಯ್ಯೆಂಬಂತೆ ಒಲಿದ-ಎಂದು ಬಸವಣ್ಣನವರು ಶಿವನನ್ನು ಸರಸವಾಗಿ ಆಕ್ಷೇಪಿಸುವ ಮೂಲಕವೇ, ಶಿವಭಕ್ತರ ಅಲ್ಪ ಸೇವೆಗಾಗಿ ಅನಲ್ಪವಾದ ಮುಕ್ತಿ ಸೌಖ್ಯವನ್ನು ಕೊಟ್ಟ ಆ ಶಿವನ ಅಸೀಮ ಔದಾರ್ಯವನ್ನು ಭಕ್ತಿಯಿಂದ ಸ್ಮರಿಸುತ್ತ, ಉಣಿಸಲು ಉಡಿಸಲು ಸ್ಥಿತಿಗತಿಯಿಲ್ಲದ, ವರ್ಣಿಸಿ ಹಾಡಲು ಕವಿತಾ ಮತಿಯಿಲ್ಲದ ತಮಗೂ ಮುಕ್ತಿ ಪ್ರಸಾದವನ್ನು ಕರುಣಿಸಿದರೆ-ಮುಯ್ಯಿಗೆ ಮುಯ್ಯಾಗದೆ-ನಿಜಧರ್ಮವಾಗಿ ಇನ್ನೂ ಹೆಚ್ಚು ಭಕ್ತಿಪ್ರಿಯನೆನಿಸುವೆ ಎಂದು ಶಿವನನ್ನು ಮುದ್ದಾಗಿ ಕೇಳಿಕೊಳ್ಳುತ್ತಲೂ ಇರುವರು.
ಬಾಣ ಮತ್ತು ಮಯೂರ: ಗಾಂಧಾರವೆಂಬ ನಗರದಲ್ಲಿ ನಂದನೆಂಬ ರಾಜನಿದ್ದ. ಅವನ ಆಸ್ಥಾನದಲ್ಲಿ ಬಾಣ ಮಯೂರ ಕಾಳಿದಾಸ ಎಂಬ ಮೂವರು ಕವಿಗಳಿದ್ದರು: ಬಾಣ ಕಾಳಿದಾಸರೀರ್ವರೂ ಶಿವಭಕ್ತರು. ಮಯೂರನು ಮೊದಲಿಗೆ ಸೂರ್ಯೋಪಾಸಕನಾಗಿದ್ದು ಆಮೇಲೆ ಶಿವಭಕ್ತನಾದವನು, ಇವನು ಸೂರ್ಯನನ್ನು ಕುರಿತು ಶತಕವೊಂದನ್ನು ಬರೆದು ತನ್ನ ತೊನ್ನು ರೋಗವನ್ನು ಕಳೆದುಕೊಂಡನು. ಇವನೊಡನೆ ಸ್ಪರ್ಧಿಸಿ ಬಾಣನು ತನ್ನ ಕೈಯನ್ನು ಕತ್ತರಿಸಿಕೊಂಡು ಶಿವನ ಕೃಪೆಯಿಂದ ಅದನ್ನು ಮರಳಿ ಪಡೆದು ಪವಾಡವನ್ನು ಮೆರೆದು ಕೈಯಿಲ್ಲದವರಿಗೆ ಕೈಯನ್ನು ದಾನಮಾಡುವ ಕಾಯಕ ಮಾಡುತ್ತಿದ್ದನು. ಮಯೂರನ “ಶಿವ ಸ್ತೋತ್ರ”ವು ವೀರಶೈವಪುರಾಣ ಪ್ರಪಂಚದಲ್ಲಿ ಬಹುಶ್ರುತವಾಗಿದೆ. (ನೋಡಿ ಹರಿಹರನ ಬಾಣರಗಳೆ ಮತ್ತು ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ್ರೆ 2-432).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.