Hindi Translationमेरे अपराध अनंत कोटि हैं,
तव सहनशीलता का लेखा नहीं ।
पुनः अपराध करुँ, तो
तव चरण की साक्षी है
कूडलसंगमदेव, तव प्रमथों के समक्ष
किन्नर बोम्मण्णा साक्षी है ॥
Translated by: Banakara K Gowdappa
English Translation Myriads without end are my sins,
And of Thy patience there's no count!
By Thy feet I swear
I will not err again!
O Kūḍala Saṅgama,
Before Thy Pioneers
Let Kinnarabommaṇṇa's feet
Be witness, Lord!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationనా తప్పులనంతకోటి నీ సైరణలు లెక్క లేవు
ఇక తప్పితినా నీ పాదమే దివ్యము
కూడల సంగమదేవా, మీ ప్రమథుల
ముందు కిన్నర బొమ్మయ్య యేసాక్షి
Translated by: Dr. Badala Ramaiah
ಕನ್ನಡ ವ್ಯಾಖ್ಯಾನನಾನು ಮಾಡಿದ ತಪ್ಪಿಗಾಗಲಿ, ನೀನು ತೋರಿದ ಸೈರಣೆಗಾಗಲಿ ಲೆಕ್ಕವಿಲ್ಲ-ಅಷ್ಟು ಸತತಾಪರಾಧಿ ನಾನು, ನಿತ್ಯದಯಾಮಯ ನೀನು. ಇಷ್ಟು ದಿನವೂ ನನ್ನ ತಪ್ಪುಗಳನ್ನು ಗಣನೆ ಮಾಡದೆ ಕೇವಲ ಕರುಣೆಯಿಂದಲೇ ನೀನು ನನ್ನನ್ನು ಸಲಹಿಕೊಂಡು ಬಂದಿರುವೆ. ಇನ್ನು ಅಪರಾಧ ಮಾಡಲು ಹೆದರಿದೆ-ಹೇಸಿದೆ-ಮರಳಿಯೂ ಮಾಡಿದ್ದೇ ಆದರೆ-ನಾನು ಮುಟ್ಟಿ ನಮಸ್ಕಾರ ಮಾಡುವ ನಿನ್ನ ಪಾದವೇ ನನಗೆ ಕೆಂಪಗೆ ಕಾದ ಕಬ್ಬಿಣವಾಗಿ ಸುಡಲಿ-ಎನ್ನುತ್ತ ಬಸವಣ್ಣನವರು ತಾವು ಕಿನ್ನರಬೊಮ್ಮಣ್ಣನೆಂಬ ಶರಣನಿಗೆ ಮಾಡಿದ ಅಪಚಾರವನ್ನು ತಿದ್ದಿಕೊಂಡಿರುವುದನ್ನು ಸಾಕ್ಷಿಯಾಗಿ ಕೊಡುತ್ತಿರುವರು:
ಬಸವಣ್ಣನವರು ಕಲ್ಯಾಣದಲ್ಲಿದ್ದಾಗ ಅವರ ಮಹಿಮೆಯನ್ನು ಕೇಳಿ ಕಿನ್ನರಿಬ್ರಹ್ಮಯ್ಯನೆಂಬ ಶರಣನು ಬಂದು ಸತ್ಕೃತನಾಗಿ ಅವರ ಮಹಾಮನೆಯಲ್ಲೇ ಸ್ವಲ್ಪ ಕಾಲವಿರುವನು. ಅವನಿಗೆ ಈರುಳ್ಳಿಯೆಂದರೆ ಬಹಳ ರುಚಿ. ಒಂದು ದಿನ ಅದರ ಹುಳಿ ಮಾಡಲು ಅದನ್ನು ಹಚ್ಚುತ್ತಿದ್ದ ವೇಳೆಗೆ ಸರಿಯಾಗಿ ಬಸವಣ್ಣನವರು ಆ ಸುತ್ತುಮುತ್ತಿಗೆ ಬರುತ್ತಾರೆ-ಈರುಳ್ಳಿಯ ನಾತವೆಲ್ಲಿಯದೆಂದು ಆಕ್ಷೇಪಿಸುತ್ತಾರೆ. ಕಿನ್ನರಿಬ್ರಹ್ಮಯ್ಯನಿಗೆ ಅವಮಾನವಾಗುತ್ತದೆ-ಮುನಿದು ಹೇಳದೆ ಕೇಳದೆ ಆ ಮನೆಯಿಂದ ಆ ಕಲ್ಯಾಣದಿಂದ ಆಚೆಗೆ ಹೊರಟು ಹೋಗುತ್ತಾನೆ. ಈ ವಿಚಾರವೆಲ್ಲಾ ತಿಳಿದಾಗ ಬಸವಣ್ಣನವರಿಗೆ ಕೆಂಡವನ್ನು ಮೆಟ್ಟಿದಷ್ಟು ಸಂಕಟವಾಗುತ್ತದೆ ಈರುಳ್ಳಿಯಿಂದಾದ ಮನಸ್ತಾಪವನ್ನು ಈರುಳ್ಳಿಯಿಂದಲೆ ಕಳೆಯಲೆಂದು ನಿಶ್ಚಯಿಸಿ-ಊರನ್ನೆಲ್ಲ ಈರುಳ್ಳಿಯಿಂದಲೇ ಶೃಂಗರಿಸಿ. ತಾನೂ ಈರುಳ್ಳಿಯನ್ನೇ ಉಟ್ಟು ತೊಟ್ಟು ಸುತ್ತಿ ಹೊದೆದು-ಈರುಳ್ಳಿಮಯವಾದ ಒಂದು ಮೆರವಣಿಗೆ ತೆಗೆದು ಕಿನ್ನರಯ್ಯನಿದ್ದಲ್ಲಿಗೆ ಹೋಗಿ ಅವನ ಮುನಿಸನ್ನು ಕಳೆದು ತರುತ್ತಾರೆ.
ಅಲ್ಲಿಂದಾಚೆಗೆ ಬಸವಣ್ಣನವರು ಕಿನ್ನರಿ ಬೊಮ್ಮಯ್ಯನ ಹೆಸರಿನಲ್ಲಿ ಪ್ರತಿವರ್ಷವೂ ಈರುಳ್ಳಿಯ ಹಬ್ಬವನ್ನು ಆಚರಿಸುವುದಾಗಿ ನೇಮವನ್ನು ಕೈಗೊಂಡರೆಂದು ಹರಿಹರನು ತನ್ನ ಬಸವರಾಜದೇವರ ರಗಳೆಯಲ್ಲಿ ತಿಳಿಸಿರುವನು. (ನೋಡಿ 2ನೇ ಸ್ಥಳ)
ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣನವರು-ತಮ್ಮ ಚಿಕ್ಕಂದಿನ ಪರಿಸರದಿಂದಾಗಿ ತಮಗೆ ಮೈಗೂಡಿದ್ದ ಕೆಲವು ಆಹಾರ ವಿಧಾನಗಳನ್ನೂ-ಶರಣರ ಸಂಪ್ರೀತಿಗಾಗಿ-ತಿದ್ದಿಕೊಳ್ಳಬೇಕಾಯಿತು.ಅವರ ಅಪಾರ ಸಂಯಮ ಮತ್ತು ತ್ಯಾಗ ಇದರಿಂದ ವ್ಯಕ್ತವಾಗುತ್ತದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.