Hindi Translationविशिष्ट भक्ति करना चाहूँ तो दस उँगलियाँ हैं।
बुनकर कमाऊँ तो मेरे लिए है, मेरे प्रमथों के लिए हैं।
पिता मारय्या की भाँति मुझे क्यों होगा?
रत्न-शृंखलाएँ डालकर सताते हैं, कूडलसंगमदेव,
पाहि पाहि देवदेव ॥
Translated by: Banakara K Gowdappa
English Translation For doing plenty acts of piety
I have ten fingers on my hands:
It is enough for me
And for the Pioneers
That I do not restrain
Myself in deeds of work....
How can it be for me
Even as for Father Mārayya ?
O Kūḍala Saṅgama Lord,
You vex me with these jewelled chains:
Alack, alack for me, my God !
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationభక్తి విశేషము సేయ పది వేళ్ళు నాకుండె;
ఒడలు వంచి కష్టింప నాకు నా ప్రమథులకూ
గలదు మారయ్య వలె నా కెట్ల గునయ్యా
రత్న సంకెళ్ళు వైచిబాధింతువే దేవ! శివధో శివధో!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಭಕ್ತಿಯನ್ನು ಮಾಡಿಕೊಂಡು ಹೋಗಲು ಎರಡು ಕೈಯಿವೆ. ಒಂದೊಂದು ಕೈಯಲ್ಲೂ ಐದೈದು ಬೆರಳಿವೆ. ನೆಯ್ದು ದುಡಿಯುವುದಾದರೆ ನನಗೆ ಮತ್ತು ನಮ್ಮ ಪ್ರಮಥ(ಶರಣ)ರಿಗೆ ಸಾಕಾಗುವಷ್ಟು ಸಂಪಾದಿಸಬಹುದು. ಆದರೆ ನಾನು ಬಿಜ್ಜಳನ ಬಳಿ ಭಂಡಾರಿ ಎಂಬ ಬಡಾಯಿಗೆ ಸಿಕ್ಕಿಬಿದ್ದು ಹಲವೊಮ್ಮೆ ಅವಮಾನಗೊಂಡಿರುವೆನಲ್ಲದೆ-ದಾಸೋಹ ಜೀವನವನ್ನು ಪೂರ್ಣಕಾಲ ನಡೆಸಲೂ ಅಸಮರ್ಥನಾಗಿದ್ದೇನೆ. ಎಲೆ ದೇವರೆ, (ನೀನು) ನನ್ನನ್ನು ರತ್ನದ ಸಂಕೋಲೆಯಲ್ಲಿ ಕಟ್ಟಿಹಾಕಿದರೇನು-ನಾನು ಬಂದಿಯಲ್ಲವೆ? ನಾನು ಭಂಡಾರಿಯಾದರೇನು-ರಾಜನ ಚಾಕರನಲ್ಲವೆ?ಎಂದು ಬಸವಣ್ಣನವರು ತಾವು ಶಿವಶರಣರ ಆಳಾಗಿಯೂ ಪ್ರಾಪಂಚಿಕರ ಮರ್ಜಿಯನ್ನು ಹಿಡಿಯಬೇಕಾದ ಉದ್ಯೋಗವೊಂದರಲ್ಲಿ ಸಿಕ್ಕಿಬಿದ್ದುದದಕ್ಕೆ ದುಃಖಿಸುತ್ತಿರುವಂತಿದೆ. ಈ ವಚನದಲ್ಲಿ ಬಸವಣ್ಣನವರು ನೆಯ್ಗೆ ಕಾಯಕ ಮಾಡಿ ತಾವು ಸ್ವತಂತ್ರವಾಗಿ ಬದುಕುವುದಲ್ಲದೆ-ದಾಸೋಹವನ್ನು ಮಾಡಲೂ ತಮಗೆ ಸಾಧ್ಯವಿದೆ ಎಂಬಂತೆ ಮಾತನಾಡುವುದನ್ನು ನೋಡಿದರೆ-ಅವರು ನೆಯ್ಗೆಯ ಕೆಲಸದಲ್ಲೂ ಪರಿಣತರಿದ್ದರೆನಿಸುವುದು.
ಇದೇ ವಚನಸಂದರ್ಭದಲ್ಲಿ ಬಸವಣ್ಣನವರು ಮಾರತಂದೆಯೆಂಬೊಬ್ಬ ಶಿವಶರಣನನ್ನು ನೆನೆದು, ಅವನಂತಾಗಲು ತಮಗಾಗಲಿಲ್ಲವೆಂದು ಮರುಗುತ್ತಲೂ ಇರುವರು. ಈ ಮಾರತಂದೆ ಯಾರೋ ಖಚಿತವಾಗಿ ಹೇಳಲಾಗುತ್ತಿಲ್ಲ. ಮಾರ ಎಂಬ ಹೆಸರಿನ ಹಲವು ಶರಣರಿದ್ದರು : ಮೋಳಿಗೆ ಮಾರತಂದೆ, ತಂಗಟೂರ ಮಾರಯ್ಯ (ನೋಡಿ ವಚನ 810), ಢಕ್ಕೆಯ ಮಾರಯ್ಯ, ಅರಿವಿನ ಮಾರಿತಂದೆ, ಕನ್ನದ ಮಾರಯ್ಯ, ಕಂಭದ ಮಾರಯ್ಯ, ಕೂಗಿನ ಮಾರಯ್ಯ, ನಗೆಯ ಮಾರತಂದೆ, ಮನಸಂದ ಮಾರಯ್ಯ, ಸತ್ತಿಗೆ ಕಾಯದ ಮಾರಯ್ಯ ಎಂದು ಮುಂತಾಗಿ ಇದರಲ್ಲಿ ನಯ್ಗೆಯ ಕಾಯಕದ ಮಾರಯ್ಯ ಯಾರು ?
ಹಾಸು ಎಂದರೆ ಹಾಸಿದ ನೂಲು, ಸಾಲಿಗ ಎಂದರೆ ನೆಯ್ಗೆಯವ ಮತ್ತು ಹಾಸು(ಹಾಸ ಪಾಶ) ಎಂದರೆ ಹಗ್ಗವೆಂದು ಹಗ್ಗವನ್ನು ಹಾಸು ಎಂದೂ ಅರ್ಥವಾಗಬಲ್ಲುದು. ಆ ಪಕ್ಷಕ್ಕೆ ಕಾಡು ಕಟ್ಟಿಗೆಯನ್ನು ಹಗ್ಗದಲ್ಲಿ ಕಟ್ಟಿ ಮಾರುತ್ತಿದ್ದ ಮೋಳಿಗೆ ಮಾರಯ್ಯನನ್ನೇ ಬಸವಣ್ಣನವರು ನೆನೆದಿರುವರೆಂದೂ ಆಗುವುದು. ವಚನದಲ್ಲಿ ಹತ್ತೂ ಬೆರಳಿನ ಪ್ರಸ್ತಾಪ ಮಾಡಿರುವುದರಿಂದ ಈ ಎರಡನೇ ಊಹೆಯೇ ಸರಿ(ಯೇನು?). ಬಸವಣ್ಣನವರು ತಮ್ಮ 810ನೇ ವಚನದಲ್ಲಿ “ಹಾಸನಿಕ್ಕಿಸಾಲಿಗನಾದ” ಎಂಬ ಮಾತಂತೂ ನೆಯ್ಗೆಯವನನ್ನು ಕುರಿತೇ ಹೇಳಿದ್ದಾಗಿದೆ. ಸಾಲಿಗನೆಂದರೆ ನೆಯ್ಗೆಯವ -ನೋಡಿ ಅಭಿಧಾನರತ್ನಮಾಲಾ-97. ನೋಡಿ ವಚನ 472.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.