Hindi Translationचन्न चेरम का दास हूँ मैं,
चरवाहा कहकर मेरी प्रशंसा करते हैं ।
कूडलसंगमेश के शरण, मेरे स्वामी चरवाह कहते हैं ।
अपने भृत्य का पुत्र समझ
मनमाना बोलते हैं ॥
Translated by: Banakara K Gowdappa
English Translation I am a servant, Lord,
Of Cenna and of Cērama :
They call me cowhard tending the dying bullock
Being my masters, they-
Kūḍala Saṅga's Śaraṇās
Call me what name they please:
Their servant's son.
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationచెన్న చేరముల యింటి సేవకుడ నేను;
నన్ను భళీ శువువులు మేపు గొల్ల డందురయ్యా!
కూడల సంగని శరణులు నాకు దొరలై
తమ తొ తు కొడుకని తలచినటు పిలుతురయ్యా.
Translated by: Dr. Badala Ramaiah
ಕನ್ನಡ ವ್ಯಾಖ್ಯಾನನನಗೆ ಒಡೆಯರು ಶಿವಶರಣರು-ನಾನು ಅವರ ಅಳು. ನನ್ನನ್ನು ಅವರು ಏನೆಂದಾದರೂ ಕರೆಯ(ಬೈಯ)ಬಹುದು-ಅವರಿಗೆ ನನ್ನ ಮೇಲೆ ಅಷ್ಟು ಹಕ್ಕಿದೆ. ಅವರು ನನ್ನನ್ನು-ನನ್ನ “ಬಸವ”ನೆಂಬ ಹೆಸರನ್ನು ಹಿಡಿದು ಗೋವ(<ಗೋಪ: ಗೂಳಿ ಅಥವಾ ದನಕಾಯುವ)ನೆಂದು ಮರ್ಮೋದ್ಘಾಟನೆಮಾಡಿ ಕರೆಯ ಬಹುದು. ಅದರಿಂದ ಅವರಿಗೆ ಸಂತೋಷವಾಗುವುದಾದರೆ-ನನಗೆ ದುಃಖವಿಲ್ಲ, ನಾನು ಆ ಶಿವಶರಣರ ಸೇವಕ. ಅಷ್ಟೇ ಅಲ್ಲ-ಅವರ ಮನೆಯ ಗುಲಾಮನ ಮಗ ನಾನು. ಮಾದಾರ ಚೆನ್ನಯ್ಯನ(ವಂಶಜರ)ಕೀಳಾಳು ನಾನು. ಅಂಥ ದಲಿತವರ್ಗದ ಶರಣರಿಗಾಗಿ-ಅವರ ಮನೆಯೊಳಗೆ ಆಳಾಗಿ ದುಡಿಯುವುದೂ, ಹೊರಗೆ ಅವರ ದನಗಳನ್ನು ಕಾಯುವುದೂ ನನ್ನ ಪವಿತ್ರ ಕರ್ತವ್ಯ. ಶಿವಶರಣರೊಂದು ಪಕ್ಷ ಚೇರಮನಂತೆ ರಾಜರಾದರೆ-ಅವರ ಸೈನ್ಯದಲ್ಲಿ ಯೋಧನಾಗಿ ಹೋರಾಡುವುದೂ ನನ್ನ ಕರ್ತವ್ಯ.
ಮಾದಾರ ಚೆನ್ನಯ್ಯ: ಕರಿಕಾಲ ಜೋಳನ ಕುದುರೆಗೆ ಹುಲ್ಲು ತರುವ (ಕಂಪಣದ ಕಾಯಕದ) ಸೇವಕ, ಗುಪ್ತ ಶಿವಭಕ್ತ, ಅಂಬಲಿಯ ನೇಮದವನು. ಚೋಳನೂ ಮಹಾಶಿವಭಕ್ತನೇ ಅದರೂ ಶಿವನು ಮೊದಲು ಒಲಿದು-ಸರಳ ಜೀವನದ ಗುಪ್ತಭಕ್ತಿಯ ಚೆನ್ನಯ್ಯನಿಗೇ-ನೋಡಿ ಹರಹರನ ಮಾದಾರ ಚೆನ್ನಯ್ಯನ ರಗಳೆ.
ಚೇರಮರಾಯ: ಇವನು ಕೇರಳದ ಶೈವರಾಜ, ಕುಡುಗು ಊರಲ್ಲಿ ವಾಸಿಸುತ್ತಿದ್ದ. ಮಹೋದಧಿ(ಸಾಗರ)ರಾಜನೆನ್ನುವ ಪ್ರಖ್ಯಾತಿಯೂ ಇವನಿಗಿತ್ತು. ತಿರುವಂಜಿಯೆಂಬಲ್ಲಿಯ ಕಾಳನಾಥ(ಶಿವ)ನ ಭಕ್ತ ನಿವನು. ಸೌಂದರಪಾಂಡ್ಯ ಮತ್ತು ಕಂಚಿಯ ರಾಜೇಂದ್ರಜೋಳ ಎಂಬ ಶೈವರಾಜರು ಇವನ ಗೆಳೆಯರು-ಮತ್ತು ನಂಬಿಯಣ್ಣ ಇವನ ಸಮಕಾಲೀನ ಮಹಾಶರಣ. ಈ ಚೇರಮನು ವೈರಾಗ್ಯದಿಂದ ರಾಜ್ಯ ಬಿಟ್ಟು ಹೋಗಲಿದ್ದಾಗ ಕಾಳನಾಥಶಿವನು ಇವನ ಮುಂದೆ ನಿತ್ಯವೂ (ತಾಂಡವನೃತ್ಯ)ಕುಣಿಯುವುದಾಗಿ ಆಶೆ ತೋರಿಸಿ ಅವನು ರಾಜ್ಯತ್ಯಾಗಮಾಡುವುದನ್ನು ತಪ್ಪಿಸುತ್ತಾನೆ.
ಬಂಟ: 1 ಸೇವಕ 2 ಯೋಧ. ಚಾಗು-ಬೊಲ್ಲ: ಪಶು ವಿಶೇಷ. ಗೋವ(ಗೋಪ): 1 ಗೂಳಿ 2 ಗೋಪಾಲಕ, ನುಡಿ: ನಿಂದಿಸು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.