Hindi Translationउस स्वर्ण कलश की अपेक्षा
जिस पर काक विष्टा करते हैं,
मुझे प्रभुओं के पहनने योग्य
चर्म-पादुका बनाओ!
स्वामी, अपने शरणों के चरणों के लिए
चर्म-पादुका बनाओ!
कर्मावलम्बिनः केचित् केचित् ज्ञानावलम्बिनः ।
वयं तु शिवभक्तानां पादरक्षावलम्बिनः ॥
कूडलसंगमदेव अंचल पसार
प्रार्थना करता हूँ, यही एक वर प्रदान करो ॥
Translated by: Banakara K Gowdappa
English Translation Rather than be the golden pot over the dome
A crow will soil,
Make me, O Lord, the leathern shoes
My masters wear;
Make me, O Lord, the leathern shoes
For Thy Śaraṇās feet!
'Some rest on works; on knowledges some;
We rest on Śiva-piety'...
O Kūḍala Saṅgama Lord,
I spread my mantle to beseech,
Oh, bless me with this single gift;
To rest on leathern shoes!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationకాకి విష్టించు పై డికలళ మగుటకంటె
ఒడయులకనువైన నన్ను చెప్పుల చేయుమయ్యా
అయ్యా మీ శరణుల పాదములకు
చమ్మపు చెప్పుల చేయుమయ్యా
కర్మావలంబనం కేచిత్ కేచిత్
జ్ఞానావలంబనం వయంతు శివభక్తానాం
పాదుకస్సా వలంబినాం
కూడల సంగమదేవా సేరగొడ్డి వేడెద
యీ వరమొకటి ప్రసాదింపుమయ్యా
Translated by: Dr. Badala Ramaiah
ಕನ್ನಡ ವ್ಯಾಖ್ಯಾನವಿನಯ
ಅರುಣೋದಯ ಸಮಯ. ಪೂರ್ವದಿಗಂತದಲ್ಲಿ ಸೂರ್ಯ ಮೂಡಿಬಂದು ಅವನ ಹೊಂಗಿರಣಗಳು ಪೂರ್ವಾಭಿಮುಖವಾಗಿಯೇ ಇರುವ ದೇವಾಲಯದ ತುಟ್ಟತುದಿಯಲ್ಲಿರುವ ಬಂಗಾರದ ಕಲಶವನ್ನು ತಾಗಿ ಅದು ಮಿನುಗುವುದನ್ನು ನೋಡಿ ಪೂಜೆಗೆಂದು ಬರುತ್ತಿರುವವರು ಮಂತ್ರಮುಗ್ಧರಾಗಿ ‘ಓಹೋ! ನಾವು ಆ ಬಂಗಾರದ ಕಲಶವೇ ಆಗಿದ್ದರೆ!’ ಎಂದುಕೊಳ್ಳಬಹುದು. ಆದರೆ ಬಸವಣ್ಣನವರ ಮನ ಇದಕ್ಕೆ ಮಾರುಹೋಗುವುದಿಲ್ಲ. ಗರ್ಭಗುಡಿಯ ಶಿಖರದ ಅತ್ಯುನ್ನತ ಸ್ಥಳದಲ್ಲಿ ಬಂಗಾರದ ಕಲಶ ಹೊಳೆಯುತ್ತಿರಬಹುದು. ತಾರೆಗಳ ಕಣ್ಣೇ ಕುಕ್ಕುವಂತೆ ಮಿನುಗುತ್ತಿರಬಹುದು. ಆದರೆ ಅದರ ಗತಿ! ‘ಕಾ, ಕಾ’ ಎಂದು ಕೂಗುತ್ತ ಬರುವ ಕಾಗೆ ಅದರ ಮೇಲೆ ಕೂತು ಹೊಲಸು ಮಾಡಿಯೇ ಬಿಡುತ್ತದೆ. ಛೆ! ಎಷ್ಟೊಂದು ಅವಮಾನ! ಆ ಕಲಶದ ಕೆಳಭಾಗದ ಗರ್ಭಗುಡಿಯಲ್ಲೋ ಅದೇ ಹೊಲಸು! ಅಲ್ಲಿ ಕಾಣಬರುವುದು ದೇವರು ಧರ್ಮಗಳಲ್ಲ; ಅವುಗಳ ಹೆಸರಿನಲ್ಲಿ ಪೂಜಾರಿ ಪುರೋಹಿತರು ಮಾಡುತ್ತಿರುವ ವ್ಯಾಪಾರ. ಹೆಸರಿಗೆ ದೇವಾಲಯವಾದರೂ ಅದು ಪೂಜಾರಿಯ ವ್ಯಾಪಾರ ಕೇಂದ್ರ. ಜನತೆಯ ಅಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಈ ಪೂಜಾರಿ, ಪುರೋಹಿತರ ವ್ಯಾಪಾರದ ಅಂಗಡಿಯ ಮೇಲೆ ಕಾಗೆ ಕೂತು ಹೊಲಸು ಮಾಡುವ ಕಲಶವಾಗುವುದೇ? ಛೆ, ಅದಕ್ಕೆ ಬದಲು ‘ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯಾ ಅಯ್ಯಾ ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ...........’ ಎಂದು ಬೇಡಿಕೊಂಡರು ಬಸವಣ್ಣನವರು. ಬೆಳಗಾಯಿತೆಂದು ಸ್ನಾನ ಮಾಡಿ ಮಡಿಯುಟ್ಟು ಶುಭ್ರಜಲದೊಂದಿಗೆ ಮಂದಿರಕ್ಕೆ ಕೆಲವು ಮಡಿವಂತರು ಪಯಣ ಬೆಳೆಸಿದರೆ, ಕಾಯಕಕ್ಕೆ ಹೊತ್ತಾಯಿತೆಂದು ಪೂಜೆಯನ್ನು ಮರೆತು, ಭರದಿಂದ ಓಡುವರು ಶರಣರು. ಕಟ್ಟಿಗೆ ಮಾರುವುದನ್ನೇ ಕಾಯಕವನ್ನಾಗಿರಿಸಿಕೊಂಡ ಕಾಶ್ಮೀರದರಸು ಮೋಳಿಗೆಯ ಮಾರಯ್ಯ ಕಾಡುಮೇಡೆನ್ನದೆ ಕಾಡಿನೊಳಗೆ ಸಂಚರಿಸಿ ಕಟ್ಟಿಗೆಯನ್ನು ಶೇಖರಿಸಿ ಹೊತ್ತು ತರುತ್ತಿದ್ದ ಶರಣ. ಕಾಯಕವನ್ನೇ ಪೂಜೆಯೆಂದೂ, ಕೈಲಾಸವೆಂದೂ ಅರಿತು ಆ ಅರಿವನ್ನುಕೃತಿಯಲ್ಲಿ ತೋರಿಸಿದವರು ಆ ಶರಣರು. ಅಂತಹ ಶರಣರ ಪಾದಕ್ಕೆ ನನ್ನನ್ನು ಚಮ್ಮಾವುಗೆಯನ್ನಾಗಿ ಮಾಡು, ಆಮೂಲಕ ಅವರ ಸೇವೆ ಮಾಡುವ ಭಾಗ್ಯವನ್ನು ದೊರಕಿಸು ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ ಬಸವಣ್ಣನವರು.
ಇಲ್ಲಿ ಮಂದಿರದ ಮೇಲೆ ಹೊಳೆಯುವ ಬಂಗಾರದ ಕಲಶವು ಎತ್ತರದಲ್ಲಿರುವುದರಿಂದ ದೊಡ್ಡತನ (ಹಿರಿತನ) ದ ಪ್ರತೀಕ. ಆದೊಡ್ಡತನದಲ್ಲಿ ಸುಖವಿಲ್ಲವೆಂದೇ ಇಲ್ಲಿ ಅಣ್ಣನವರ ಅಭಿಪ್ರಾಯ. ಏಕೆಂದರೆ ಅಲ್ಲಿ ಕಾಗೆಯಂತಹ ಸಣ್ಣವರ ಕಿರುಕುಳವಿರುತ್ತದೆ. ಆದ್ದರಿಂದ ಅಂತಹ ಹಿರಿಯತನಕ್ಕೆ ಮನಸೋಲದೆ ನಾನು ಎಲ್ಲರಿಗಿಂತ ಕಿರಿಯನೆಂಬ ಭಾವನೆಯನ್ನು ತಾಳಿದರೆ ಅಲ್ಲಿ ದೊಡ್ಡವರ (ಹಿರಿಯರ) ರಕ್ಷಣೆಯು ದೊರಕುತ್ತದೆ; ಉತ್ತಮ ಸಹವಾಸವೂ ದೊರೆಯುತ್ತದೆ. ಹೀಗೆ ಎಲ್ಲರೂ ಹಿರಿಯತನದ ಹೆಮ್ಮೆಗೆ ಹೊಡೆದಾಡಿ ಅದರಲ್ಲಿ ಸುಖ ಕಾಣಹೊರಟರೆ ಬಸವಣ್ಣನವರು ‘ಎನಗಿಂತ ಕಿರಿಯರಿಲ್ಲ........’ ಎಂದು ಕಿರಿಯತನಕ್ಕೆ ಹಂಬಲಿಸಿ, ‘ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದು ಕೂಡಲಸಂಗನ ಶರಣರ ಹಿರಿಮೆಯ ರಕ್ಷಣೆಯಲ್ಲಿ ಅಮಿತ ಸುಖಾನಂದಗಳಿರುವುದನ್ನು ಕಂಡುಕೊಂಡರು. ಅವರ ರಕ್ಷಣೆಯನ್ನುಪಡೆಯುವುದಕ್ಕಾಗಿಯೇ ಅವರ ಸಾನ್ನಿಧ್ಯಕ್ಕಾಗಿ ದೇವರಲ್ಲಿ ಸೆರಗೊಡ್ಡಿ ಬೇಡಿಕೊಂಡರು. ‘ಅಯ್ಯಾ ನಿಮ್ಮಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯಾ! ಕೂಡಲಸಂಗಮದೇವಾ ನಿಮ್ಮ ಸೆರೆಗೊಡ್ಡಿ ಬೇಡುವುದೊಂದೇ ವರವ ಕರುಣಿಸಯ್ಯಾ’.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.