Hindi Translationदीखने पर सुख है, न दीखने पर दुःख ,
दिन रात होता है, रात दिन होता है,
कैसे अपने को धिक्कारता समय बिताऊँ?
एक युग मुझ पर पडा सा है,
कूडलसंग के शरणों के वियोग-जन्य
संकट की अपेक्षा मरण ही अच्छा है ॥
Translated by: Banakara K Gowdappa
English Translation To see them is
My heart's delight;
And doomsday when I do not see!
Behold! day follows night,
Night follows day:
How, Lord, can I spend my days
In uttering humility?
It is as if I had to bear
The burden of an age
Rather than grieve
For parting from
Kūḍala Saṅga's Śaraṇās
Look, Lord, I welcome death!
Translated by: L M A Menezes, S M Angadi
Tamil TranslationTranslated by: Smt. Kalyani Venkataraman, Chennai
Telugu Translationచూడమదికి సొంపగునయ్యా
చూడకున్న శోకమయ్యా
పగలు రాత్రియగు రాత్రి పగలగునుగాని
యీ యనద బ్రతుకు నా కెట్లయ్యా?
యుగమే దొర్లినట్లుండె; సంగని శరణుల
వియోగ వ్యధకంటె మరణమే మేలయ్యా!
Translated by: Dr. Badala Ramaiah
ಕನ್ನಡ ವ್ಯಾಖ್ಯಾನಶರಣರನ್ನು ಕಂಡರೆಷ್ಟು ಮನ ಹಿಗ್ಗುವುದೋ-ಕಾಣದಿದ್ದರಷ್ಟೂ ಕುಗ್ಗುವುದು. ಆ ವಿಕಳಾವಸ್ಥೆಯನ್ನು ತಾಳುವುದು ನನ್ನಿಂದಾಗದು ಶರಣರನ್ನು ಕಾಣದಿದ್ದರೆ-ಆ ಹಗಲೆಲ್ಲಾ ಮೋಡಗತ್ತಲೆ ಮುಸುಕಿದಂತೆ-ನನ್ನ ಬುದ್ಧಿಗೆ ಮಂಕು ಕವಿದು ಅದು ಕಾಳರಾತ್ರಿಯಾದಂತೆನಿಸುವುದು. ಶರಣರನ್ನು ಕಾಣದಿದ್ದರೆ-ರಾತ್ರಿಯೆಲ್ಲಾ ನಿದ್ರೆ ಹತ್ತದೆ ಹಗಲಂತಾಗುವುದು-ತಾಪವನ್ನು ತಾಳಲಾಗುವುದಿಲ್ಲ. ಘಾಸಿಗೊಳಗಾಗಿ ನಾನು ಹೇಗೆ ತಾನೇ ಕಾಲ ತಳ್ಳುವೆನು ? ಒಂದೊಂದು ದಿನವೂ ಯುಗಯುಗಾಂತರವೆನಿಸುವುದು ! ಈ ರೀತಿ ಧಾವತಿ ಪಡುವುದಕ್ಕಿಂತ ನನಗೆ ಸಾಯುವುದೇ ಸುಖಕರವೆನಿಸುವುದು ಎಂದು ಬಸವಣ್ಣನವರು ಶರಣರನ್ನು ಕಾಣದೆ ಒಪ್ಪೊತ್ತೂ ಜೀವಿಸುವುದು ತಮ್ಮಿಂದ ಸಾಧ್ಯವಿಲ್ಲವೆನ್ನುತ್ತಿರುವರು.
ಭಕ್ತನೇತಾರರಾದ ಶರಣರ ಮೂಲಕ ಬಸವಣ್ಣನವರು ಮಾಡಬೇಕಾಗಿದ್ದ ಕಾರ್ಯ ಅಪಾರವಿದ್ದಾಗ-ಆ ಶರಣರು ಬರದಿದ್ದರೆ-ಬಸವಣ್ಣನವರಿಗೆ ಜೀವನ ಎಷ್ಟು ದುರ್ಭರವಾಗುತ್ತಿತ್ತೆಂಬುದನ್ನು ಊಹಿಸುವುದು ಸುಲಭವಲ್ಲ.
ನನಗೆ ಈ ಭಾವರ್ತದ ಅರ್ಥ ಬೇಕಾಗಿದೆ ದಯಾಳುಗಳ ತಾವುಗಳು ದಯವಿಟ್ಟು ಭಾವಾರ್ಥ ಬರೆದು ಕಳಿಸಿದರೆ ತುಂಬಾ ಸಹಾಯವಾಗುತ್ತದೆ
  ರವೀಂದ್ರಕುಮಾರ ಭಂಟನಳ್ಳಿ
????????
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.