ಬಸವಣ್ಣ   
Index   ವಚನ - 395    Search  
 
ಕೃತಯುಗದಲ್ಲಿ ಕೇ(ದಾ)ರವೆಂಬ ಮೂಲಸ್ಥಾನ; ತ್ರೇತಾಯುಗದಲ್ಲಿ ವಾರಣಾಸಿಯೆಂಬ ಮೂಲಸ್ಥಾನ; ದ್ವಾಪಾರದಲ್ಲಿ ವಿರೂಪಾಕ್ಷನೆಂಬ ಮೂಲಸ್ಥಾನ; ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ. ನಾನಾ ಸ್ಥಾನಂಗಳ ಮುಟ್ಟದೆ ಜಂಗಮವೆ ಲಿಂಗವೆಂದು ನಂಬಿದೆ, ಕೂಡಲಸಂಗಮದೇವಾ.