Index   ವಚನ - 11    Search  
 
ಅರಿವು ಸಂಬಂಧವುಳ್ಳ ಪರಿಪೂರ್ಣಜ್ಞಾನಿಗಳ ಅಡಿಗಳಿಗೆ ನಾನೆರಗುವೆನಯ್ಯಾ. ಎಡೆದೆರಹಿಲ್ಲದೆ ಮೃಡನ ನೆನೆವವರ ಅಡಿಗಳಿಗೆ ನಾನೆರಗುವೆನಯ್ಯಾ. ಕಡುಗಲಿಗಳ ಕಂಡಡೆ ಪರಶಿವನೆಂಬೆನಯ್ಯಾ; ಅಮುಗೇಶ್ವರಲಿಂಗವನರಿದ ಘನಮಹಿಮನೆಂಬೆನಯ್ಯಾ.