ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರೂ ಇಲ್ಲಯ್ಯಾ!
ಕೂಡಲಸಂಗಮದೇವಾ,
ಹಾಲಲದ್ದು, ನೀರಲದ್ದು!
Art
Manuscript
Music Courtesy:Vachana Sumana ℗ 2021 - Singer: Srinivasa and Nandini, Pebble Productions Music Publisher: Pebble Productions, Provided to YouTube by DMRS Ltd, Released on: 2008-07-15
Hindi Translationपिता तुम हो, माता तुम हो
बंधु तुम हो, बाँधव तुम हो
तुम्हारे सिवा मेरा कोई नहीं है;
कूडलसंगमदेव
मुझे दूध में डुबाओ या पानी में ॥
Translated by: Banakara K Gowdappa
English Translation My father Thou, my mother too;
Thou also all my kith and kin...
Save Thou no kinderd is to me!
O Kūḍala Saṅgama Lord,
Do with me as thou please!
Translated by: L M A Menezes, S M Angadi
Tamil Translationதந்தை நீ, தாய் நீ
உறவினன் நீ, என் சுற்றத்தார் நீ
நீரின்றி வேறு எவரும் இல்லை ஐயனே
கூடல சங்கமதேவனே
வாழ வைப்பாய், மடிய வைப்பாய்
Translated by: Smt. Kalyani Venkataraman, Chennai
Telugu Translationతల్లి వీవు; తండ్రి వీవు
బంధువీవు; బలగమీవు
నీవే దప్ప నిక యెవ్వరూ నాకు లేరయ్యా
పాల ముంచినా నీట ముంచినా
నీవే గతి నాకు సంగమదేవా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಭಕ್ತನ ಪ್ರಾಣಲಿಂಗಿ ಸ್ಥಲವಿಷಯ -
ಶರಣಾಗತಿ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನದೇವರೇ ಸರ್ವಸ್ವವು
ಇದು ದೇವರಲ್ಲಿ ಮಾಡಿಕೊಂಡ ಭಕ್ತನ ಆತ್ಮಾರ್ಪಣಭಾವವನ್ನು ಪ್ರತಿ ಬಿಂಬಿಸುತ್ತದೆ. ಭಕ್ತನಾದವನು ತನ್ನನ್ನೇ ದೇವರಿಗೆ ಸಮರ್ಪಿಸಿಕೊಂಡಾಗ ಅವನಿಗೆ ತಂದೆ, ತಾಯಿ, ಬಂಧು ಬಳಗ ಎಲ್ಲವೂ ದೇವರೇ. ನೀನಲ್ಲದೆ ಮತ್ತಾರೂ ಇಲ್ಲವಯ್ಯಾ, ಭಕ್ತನಿಗೆ ದೇವರನ್ನು ಬಿಟ್ಟರೆ ಅವನ ಸಂರಕ್ಷಕರನ್ನುವವರಾರೂ ಇಲ್ಲ. ದೇವರು ತನ್ನನ್ನು ಹಾಲಲ್ಲಾದರೂ ಅದ್ದಲಿ, ನೀರಲ್ಲಾದರೂ ಅದ್ದಲಿ ಎಂದು ಭಕ್ತ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಾಗ ತನ್ನ ಆಪತ್ತು ಸುಖ-ದುಃಖಗಳ ಚಿಂತೆ ದೇವರದೇ ಹೊರತು ಭಕ್ತನದಲ್ಲ. ಹಾಗಾದಾಗ ಭಕ್ತನು ತಾಯಿಯ ರಕ್ಷಣೆಯಲ್ಲಿರುವ ಬೆಕ್ಕಿನ ಮರಿಯಂತೆ ನಿಶ್ಚಿಂತೆಯಿಂದ ಇರಬಹುದು. ಎಂದರೆ :
ಬೆಕ್ಕಿನ ಮರಿ ನಡೆಯಲಾರದಷ್ಟು ಚಿಕ್ಕದಾಗಿ ಇನ್ನೂ ಕಣ್ಣು ಬಿಡದೆ ಇರುವಾಗ ಅದನ್ನು ಒಂದು ಕಡೆಯಿಂದ ಮತ್ತೊಂದು ಸುರಕ್ಷಿತ ಸ್ಥಳಕ್ಕೆ ತಾಯಿ ಬೆಕ್ಕೇ ಸಾಗಿಸುತ್ತಿರುತ್ತದೆ. ಆಗ ತನ್ನ ಮರಿಯನ್ನು ತಾನೇ ಅಪಾಯವಾಗದಂತೆ ಎಚ್ಚರಿಕೆಯಿಂದ ಕಚ್ಚಿಕೊಂಡು ಎಲ್ಲಿಯೂ ಎತ್ತಿಹಾಕದಂತೆ ನಡೆದು, ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಜೋಪಾನ ಮಾಡುತ್ತದೆ. ಆದರೆ ಕೋತಿಯ ಮರಿಯು ಚಿಕ್ಕದಾಗಿದ್ದಾಗ ಅದು ತನ್ನ ತಾಯಿಯ ಮೈಗೆ ಅಂಟಿಕೊಂಡು (ಅದರ ಶರೀರವನ್ನು ತಬ್ಬಿಕೊಂಡು) ಒಂದು ಕಡೆಯಿಂದ ಮತ್ತೊಂದುಕಡೆಗೆ ಹೋಗಬೇಕಾಗುತ್ತದೆ. ಎಂದರೆ ಮರಿಯು ತಾಯಿಯ ಶರೀರವನ್ನು ತಾನೇ ಬಿಗಿಯಾಗಿ ಹಿಡಿದುಕೊಂಡಿರುತ್ತದೆ. ಬೀಳದಂತೆ ಎಚ್ಚರಿಕೆವಹಿಸಬೇಕಾದ ಹೊಣೆ ಮರಿಯದೇ ಹೊರತು ತಾಯಿಯದಲ್ಲ. ಆದರೆ ಬೆಕ್ಕಿನ ಮರಿಯ ಹೊಣೆ ಏನೇನೂ ಇಲ್ಲ. ಅದಕ್ಕೆ ಬೇಕಾದ ಸಕಲ ರಕ್ಷಣಾ ವ್ಯವಸ್ಥೆಯನ್ನು ತಾಯಿ ಬೆಕ್ಕೇ ಮಾಡುತ್ತಿರುತ್ತದೆ. ‘ಹಾಲಲ್ಲಾದರೂ ಅದ್ದು ನೀರಲ್ಲಾದರೂ ಅದ್ದು’ ಎಂದು ದೇವರನ್ನು ಸಂಪೂರ್ಣವಾಗಿ ನಂಬಿರುವ ಭಕ್ತನು ನಿಶ್ಚಿಂತನಾಗಿದ್ದು ದೇವರ ರಕ್ಷಣೆಯಲ್ಲಿ ಕ್ಷೇಮವಾಗಿರಬಹುದು.
- ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.
ಜಗತ್ತಿನಲ್ಲಿರುವ ಪ್ರತಿಯೊಂದು ಸಕಲ ಜೀವಿಗಳಿಗೂ ಜೀವ ನೀನು, ಶಕ್ತಿ ನೀನು
ಕೂಡಲಸಂಗಮದೇವ.
  ನಟರಾಜ T. S D.B.Halli
ವಚನಕಾರ ಮಾಹಿತಿ
ಬಸವಣ್ಣ
ಅಂಕಿತನಾಮ:
ಕೂಡಲಸಂಗಮದೇವ
ವಚನಗಳು:
1409
ಕಾಲ:
12ನೆಯ ಶತಮಾನ
ಕಾಯಕ:
ಪ್ರಧಾನಮಂತ್ರಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಇಂಗಳೇಶ್ವರ-ಬಾಗೇವಾಡಿ, ವಿಜಯಪುರ ಜಿಲ್ಲೆ.
ಕಾರ್ಯಕ್ಷೇತ್ರ:
ಕೂಡಲಸಂಗಮ-ಮಂಗಳವೇಢೆ-ಕಲ್ಯಾಣ
ತಂದೆ:
ಮಾದರಸ
ತಾಯಿ:
ಮಾದಲಾಂಬಿಕೆ
ಸತಿ/ಪತಿ:
ಗಂಗಾಂಬಿಕೆ ಮತ್ತು ನೀಲಾಂಬಿಕೆ
ಐಕ್ಯ ಸ್ಥಳ:
ಕೂಡಲಸಂಗಮ, ಹುನಗುಂದ ತಾಲ್ಲೂಕು, ಬಾಗಲಕೋಟೆ ಜಿಲ್ಲೆ.
ಪೂರ್ವಾಶ್ರಮ:
ಆಗಮಿಕ ಶೈವಬ್ರಾಹ್ಮಣ
ಸಂಕ್ಷಿಪ್ತ ಪರಿಚಯ:
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.