Index   ವಚನ - 15    Search  
 
ಆರುಸ್ಥಲದಲ್ಲಿ ನಿಂದವಂಗೆ ಬೇರೊಂದು ಬ್ರಹ್ಮದ ಮಾತೇಕೆ? ಬೀದಿಯಲ್ಲಿ ನಿಂದು ನೀನೇನು, ತಾನೇನು ಎಂಬವಂಗೆ ಆದ್ಯರ ವಚನವೇಕೆ? ಗಗನವ ಮುಟ್ಟುವಂಗೆ ಅಗಣಿತನ ಸುದ್ದಿಯೇಕೆ? ಆರುಸ್ಥಲದಲ್ಲಿ ನಿಂದವಂಗೆ ಅಭೇದ್ಯನ ಸುದ್ದಿಯೇಕೆ? ಆರು ಸ್ಥಲವೆಂಬುವ ಷಟ್‍ಸ್ಥಲಜ್ಞಾನಿಗಳ ಅರಿವು ಮೀರಿದ ಘನವು ನಿಮಗೇಕೆ? ಅಮುಗೇಶ್ವರಲಿಂಗವನರಿಯರಣ್ಣಾ.