Hindi Translationमैं लज्जाहीन हुआ, शीलहीन हुआ।
कुलहीन हुआ और छलहीन॥
संगमेश तव पूजा कर मैं भवहीन हुआ,
तव स्पर्श कर मैं जन्म-मुक्त हुआ कूडलसंगमदेव॥
Translated by: Banakara K Gowdappa
English Translation I lost all shame and bashfulness;
I lost all pride of class and self;
Having adored Thee, O Saṅgā
I lost this wordly life;
Attaining thee, O Kūḍala Saṅgama Lord,
I lost my wheel of births!
Translated by: L M A Menezes, S M Angadi
Tamil Translationவெட்கம் கெட்டேன், நாணம் கெட்டேன்
குலம் கெட்டேன், உறுதி கெட்டேன்
சங்கனே உம்மைப் பூசித்து, பிறவியகற்றினேன்
கூடல சங்கம தேவனே
உம்மை அடைந்து பிறவியை அகற்றினேன் ஐயனே.
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನಚೆನ್ನಿಯು ಚೆನ್ನಿಗನೊಬ್ಬನನ್ನು ಎಷ್ಟು ಪ್ರೀತಿಸುವಳೆಂದರೆ-ಆ ಸಂಬಂಧವನ್ನು ಒಪ್ಪದ ತಾಯಿ ತಂದೆ ಮುಂತಾಗಿ ಯಾರನ್ನೂ ತೊರೆದುಕೊಂಡಾಳೇ ಹೊರತು ಆ ಚೆನ್ನಿಗನನ್ನು ಮಾತ್ರ ಬಿಡಲಾರಳು-ಬಿಟ್ಟು ಬದುಕಿರಲಾರಳು, ಜನ ಆಡಿಕೊಳ್ಳಲಿ, ಮರ್ಯಾದೆ ಹೋಗಲಿ, ಪ್ರಾಣಭಯವಿರಲಿ ಆ ಪ್ರೇಮಿಯನ್ನು ಪ್ರೇಮಿಸದೆ ಇರಲಾರಳು. ತನ್ನನ್ನು ಕುಲದಿಂದ ಹೊರಗೆ ಹಾಕಲಿ, ಅದುವರೆಗೆ ಅವಳೇ ರಕ್ಷಿಸಿಕೊಂಡು ಬಂದಿದ್ದ ಆತ್ಮಾಭಿಮಾನವೆಲ್ಲ ಚೂರಾಗಲಿ-ಅವಳು ಪ್ರೇಮದೀವಿಗೆಯನ್ನು ಜೀವನಪ್ರವಾಹದಲ್ಲಿ ತೇಲಿಬಿಡದೆ ನಿಲ್ಲಳು. ಇದು ಈ ಜೀವದ ಪ್ರೇಮಕಥೆ.
ಭಕ್ತಿಯ ಕಥೆ ಮತ್ತಷ್ಟು ಅದ್ಭುತವಾಗಿಯೇ ನಡೆದೀತು. ಶಿವನಿಗೆ ಮಾರುಹೋದ ಜೀವಾತ್ಮವು ತನ್ನ ಸಾಧನೆಯ ಮಾರ್ಗದಲ್ಲಿ ಭೌತಿಕವಾದುದೆಲ್ಲವನ್ನೂ ಮುಡಿಪಿಟ್ಟು ಮಿಗಿಲಾಗಿ ಅಚಲವಾಗಿ ನಿಲ್ಲದೆ ಬಿಡದು. ಆ ಚೆನ್ನಿಯು ಪ್ರೇಮ ಭವದಲ್ಲಿ ಏಳುವ ದಳ್ಳುರಿಯಾದರೆ-ಈ ಜೀವಾತ್ಮದ ಭಕ್ತಿಪ್ರೇಮ ಆ ಭವದಾಚೆಯ ಅಂಚಿನ ಅಭವನಲ್ಲಿ ಒಂದಾಗಲು ಧಗಧಗಿಸುವ ಶುದ್ಧ ಧವಳಜ್ವಾಲೆ !
ಆ ಪ್ರೇಮದ ಮತ್ತು ಈ ಭಕ್ತಿಯ ಕೇಂದ್ರ ಒಂದೇ ಆದರೂ ಪರಿಧಿಗಳು ಉತ್ತರೋತ್ತರ ವಿಸ್ತೃತವಾಗಿ ಮಾಯಾಮಯವೆಂದು ನಿರಾಮಯವೆಂದು ತೀರ ಭಿನ್ನ ಭಿನ್ನ. ಇಂಥ ಭಕ್ತಿದರ್ಶನವನ್ನು ಪ್ರೇಮ ನಿದರ್ಶನದಲ್ಲಿ ಪಡಿಮೂಡಿಸಿರುವರು ಬಸವಣ್ಣನವರು.
ಬ್ರಾಹ್ಮಣರಾಗಿ ಹುಟ್ಟಿದ ಬಸವಣ್ಣನವರು ಶಿವಪಂಥಕ್ಕೆ ಸೇರಿದ ಸಂದರ್ಭದಲ್ಲಿ ಏನೆಲ್ಲ ಮಾನಸಿಕ ಸಾಮಾಜಿಕ ನೋವನ್ನು ತಿಂದರೆಂಬುದನ್ನು ಇಲ್ಲಿ ಮಾತುಮಾತಿಗೂ- ಆ ಮಾತನ್ನು ಹೊರಳಿಸಿ ನೋಡಿ ಕಾಣಬಹುದು. ಬಸವಣ್ಣನವರು ಈ ಮತಾಂತರದ ಹಾದಿಯಲ್ಲಿ ಉಂಡ ನೋವು ಎಷ್ಟೇ ದಾರುಣವಾದರೂ-ಅವರು ಮುಂದುವರಿದು ಪಡೆದ ಆತ್ಮತೃಪ್ತಿಯನ್ನು ಈ ವಚನದಲ್ಲಿ ಮನಗಾಣಬಹುದಾಗಿದೆ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.