Hindi Translationविष्णु पूजा कर भुजाएँ जला लेते मैंने देखा,
जिनकी पूजा कर नंगा रहते देखा,
मैलार की पूजा कर श्वान भूँकते देखा,
मम कूडलसंगमेश के शरणों की पूजा कर
दैव भक्त कहलाते देखा ॥
Translated by: Banakara K Gowdappa
English Translation I have seen shoulders branded
After Viṣṇu worship;
I have seen nakedness
After Jina worship;
I have seen men barking like dogs
After Mailāra worship;
I have seen them called
Devotees of God
After the worship of
Our Kūḍala Saṅga's Śaraṇās!
Translated by: L M A Menezes, S M Angadi
Tamil Translationதிருமாலைப் பூசித்து, தோளைச் சுட்டுக்
கொண்டவரைக் கண்டேன்
அருகனைப் பூசித்து, நிர்வாணமானதைக் கண்டேன்
மைலாரு தேவதையைப் பூசித்து, நாயாகிக் குலைப்பதைக் கண்டேன்
நம் கூடல சங்கனைப் பூசித்து, இறைவனே
பக்தரானவர்களைக் கண்டேன்
Translated by: Smt. Kalyani Venkataraman, Chennai
ಕನ್ನಡ ವ್ಯಾಖ್ಯಾನವಿಷ್ಣು-ಜಿನ್ನ(ಅರ್ಹಂತ)-ಮೈಲಾರ ದೇವರುಗಳನ್ನು ಪೂಜಿಸಿದರೆ ಪಡಬೇಕಾದ ಭಂಗವನ್ನು ಹೆಸರಿಸಿ-ಶಿವಶರಣರನ್ನು ಪೂಜಿಸಿದರೆ “ದೈವಭಕ್ತನೆಂಬ ಗೌರವವೇ ಹೊರತು ಅವಮಾನವೇನೂ ಆಗುವುದಿಲ್ಲವೆಂದಿದೆ ಈ ವಚನದಲ್ಲಿ.
ಆ ಪ್ರಕಾರ ವೈಷ್ಣವರಿಗೆ ವಿಷ್ಣುವೇ ಆರಾಧ್ಯದೈವ. ಜೈನರಿಗೆ ಅರ್ಹಂತನೇ ಆರಾಧ್ಯದೈವ, ಶೈವದ ಒಂದು ಒಳಪಂಗಡಕ್ಕೆ ಮೈಲಾರನೇ ಆರಾಧ್ಯದೈವ-ಬಸವಣ್ಣನವರ ಶಿವಪಂಥದವರಿಗಾದರೋ ಶಿವಶರಣರೇ ಆರಾಧ್ಯದೈವ. ಬಸವಪಂಥದಲ್ಲಿ ಶರಣರಿಗೆ ಅಷ್ಟೊಂದು ಪೂಜ್ಯಸ್ಥಾನವಿದೆಯೆಂಬುದನ್ನು ಗಮನಿಸಬೇಕು.
ವಿ : ಮೈಲಾರ-ಶರಣಪಂಥದಲ್ಲಿ ಮೈಲಾರನ ಪೂಜೆ ಶಂಕರದಾಸಿಮಯ್ಯನ ಕಾಲ(11ನೇ ಶತಮಾನ)ದಿಂದಲೂ ನಿಷಿದ್ದವಿತ್ತೆಂಬುದಕ್ಕೆ ಹರಿಹರನ ಶಂಕರದಾಸಿಮಯ್ಯನ ರಗಳೆಯಲ್ಲಿ ಬಂದಿರುವ ಪೆಂಬೇರ ಮೈಲಾರನ ಪ್ರಸಂಗವೇ ಸಾಕ್ಷಿ.
ಶಿವನು ಭೈರವನಾಗಿ ಬಂದು “ಮೈಲಾರಿ”ಯಾಗಿ ಭೂಲೋಕದಲ್ಲಿ ನೆಲಸಿದಂತೆ ಒಂದು ಸ್ಥಳ ಪುರಾಣದ ಹೇಳಿಕೆಯಿರುವುದಾಗಿ “ದಕ್ಷಿಣ ಕರ್ನಾಟಕ ಜನಪದ ಕಾವ್ಯಪ್ರಕಾರಗಳು” ಎಂಬ ಗ್ರಂಥದ ಉಲ್ಲೇಖ (ಪುಟ 249)ದಿಂದ ತಿಳಿದುಬರುವುದು. ಭೈರವೋಪಾಸಕರಾದ ಜೋಗಿಜೋಗಿಣಿಯರ ಆರಾಧ್ಯದೈವ ಭೈರವನೇ ಆಗಿರುವುದರಿಂದ ಕಾಪಾಲಿಕಶೈವರ ಉಪಪಂಗಡಗಳಲ್ಲಿ (ಈ ಜೋಗಿಗಳ ಮತ್ತು) ಗೊರವಯ್ಯಗಳ ಮೈಲಾರಪಂಥ ಸೇರ್ಪಡೆಯಾಗುವುದೆನ್ನಬೇಕಾಗುವುದು.
ಈ ಮೈಲಾರ ಶೈವಪಂಥದವರೊಡನೆ ವೀರಶೈವರು ಒಂದು ಕಾಲಕ್ಕೆ ಕೊಟ್ಟು ತರುವ ಸಂಬಂಧವನ್ನು ಇಟ್ಟುಕೊಂಡಿದ್ದುದೂ ಉಂಟು. ವಿರಕ್ತ ತೋಂಟದಾರ್ಯನ ಸಿದ್ದೇಶ್ವರಪುರಾಣದಲ್ಲಿ ತೋಂಟದ ಸಿದ್ದಲಿಂಗನ ದರ್ಶನಮಾಡಲು ಹೊರಟ ಒಬ್ಬ ಶಿವಭಕ್ತನು-ಹೆಂಡತಿಯನ್ನು ಜೊತೆಗೆ ಬರಹೇಳಿದರೆ-ಅವಳು ತನ್ನ ಮನೆ ದೇವರಾದ ಮೈಲಾರನು ಮುನಿಯುವನೆಂದು ತಿರಸ್ಕರಿಸುವಳು. ಮತ್ತು ಭೈರವೇಶ್ವರ ಕಾವ್ಯಕಥಾಸೂತ್ರ ರತ್ನಾಕರ(ಭಾಗ 1, ಪುಟ 203-204)ದ ಪ್ರಕಾರ ಚೋಳದೇಶದ ಕಲಿಗಣನಾಥ (ಇವನು 63 ಜನ ಪುರಾತನರಲ್ಲಿ ಒಬ್ಬ)ನು ರೈತಗೌಡನೋರ್ವನಿಗೆ ಲಿಂಗಧಾರಣೆ ಮಾಡಿಸಿಕೋ ಎಂದಾಗ-“ಕೆಟ್ಟೆ ಕೆಟ್ಟೆ, ನಮ್ಮವನೊಬ್ಬ ಕೊಬ್ಬಿ ಲಿಂಗವನ್ನು ಕಟ್ಟಿಕೊಳ್ಳಲು-ಮನೆ ಬೆಂದು, ಬದುಕು ಹೋಗಿ ಕೆಟ್ಟನು” ಎನ್ನುತ್ತ ನಡುಗುವನು. ಈ ರೈತಗೌಡನೂ ಒಬ್ಬ ಮೈಲಾರಪೂಜಕನೇ. ಆದ್ದರಿಂದ ಈ ಮೈಲಾರ ಶೈವಪಂಥದವರು ಲಿಂಗವನ್ನು ಪೂಜಿಸಿದ್ದೂ ಉಂಟು. ಇದೇ ಮೈಲಾರ ಸಂಪ್ರದಾಯದ ಗೊರವಯ್ಯಗಳಿಗೆ ಮೈಲಾರನ ವಾಹನವಾದ ನಾಯಂತೆ ಬೊಗಳುವುದು ಮತ್ತು ಕೈಯೂ ಸೇರಿದಂತೆ ನಾಲ್ಕು ಕಾಲಾಗಿ ನಾಯಂತೆ ದೇವರ ಎಡೆಯನ್ನು ನೇರವಾಗಿ ಬಾಯಿಂದ ತಿನ್ನುವುದು ಬಹಳ ವಿಶಿಷ್ಟವಾದ ಧಾರ್ಮಿಕ ಆಚರಣೆಗಳು !
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.